ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಹಿರೇಬಾಗೇವಾಡಿ ಗ್ರಾಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅನುದಾನ ಹಾಗೂ ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆ ವತಿಯಿಂದ 10 ಲಕ್ಷ ರೂ,ಗಳ ವೆಚ್ಚದಲ್ಲಿ “ಸಾಂಸ್ಕೃತಿಕ ಸಮುದಾಯ ಭವನ” ಕಟ್ಟಡದ ಕಾಮಗಾರಿಗೆ ಮತ್ತು ಹಿರೇಬಾಗೇವಾಡಿ ಗ್ರಾಮದ ಮುಸ್ಲಿಂ ಕಾಲೋನಿಯಲ್ಲಿ ಅಲ್ಪ ಸಂಖ್ಯಾಂತರ ಅಭಿವೃದ್ಧಿಯ ಅನುದಾನ ಹಾಗೂ ಲೋಕೋಪಯೋಗಿ ಇಲಾಖೆ ವತಿಯಿಂದ 20 ಲಕ್ಷ ರೂ.ಗಳ ವೆಚ್ಚದಲ್ಲಿ ಕಾಂಕ್ರೀಟ್ ರಸ್ತೆಯ ನಿರ್ಮಾಣದ ಕಾಮಗಾರಿಗಳಿಗೆ ಶುಕ್ರವಾರ ಪೂಜೆ ನೆರವೇರಿಸಲಾಯಿತು.
ಸ್ಥಳೀಯ ಜನಪ್ರತಿನಿಧಿಗಳು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ. ಸಿ. ಪಾಟೀಲ, ಚನ್ನರಾಜ ಹಟ್ಟಿಹೊಳಿ ಹಾಗೂ ಪಕ್ಷದ ಮುಖಂಡರು ಕಾಮಗಾರಿಗೆ ಧಿಕೃತವಾಗಿ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು, ಸುರೇಶ ಇಟಗಿ, ಗೌಸಮೊದ್ದಿನ್ ಜಾಲಿಕೊಪ್ಪ, ಯಲ್ಲಪ್ಪ ಕೆಳಗೇರಿ, ಶಮಿನಾ ನದಾಪ್, ಮಲ್ಲಪ್ಪ ಹುಲಿಕವಿ, ಶಿವಾನಂದ ತೋಟಗಿ, ನಾಗರಾಜ ಬೆಟಗೇರಿ, ಆನಂದ ಪೊಲೆಸಿ, ಚಿನ್ನಪ್ಪ ಕೊಂಡಗೂರಿ, ಅಬ್ಬು ಟೊಕ್ಕೆದ, ರಾಜು ಪಾಟೀಲ, ಅಡಿವೆಪ್ಪ ತೊಟಗಿ, ರವಿ ಗಾನಗಿ, ಸಂತೋಷ ಮುರಗೋಡ, ಚಂದ್ರಶೇಖರ ಅಂಗಡಿ, ಶಿವನಗೌಡ ನಾಯ್ಕರ್, ಮನೋಹರ್ ದುರ್ಗಣ್ಣವರ ಹಾಗೂ ಪಕ್ಷದ ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ