Latest

ಡ್ರಗ್ ಡೀಲರ್ ಅನಿಕಾ ಮಾಹಿತಿ ಕಲೆ ಹಾಕಿದ ಎನ್ ಸಿಬಿ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಡ್ರಗ್ ಡೀಲರ್ ಗಳ ಕಿಂಗ್ ಪಿನ್ ಅನಿಕಾ ಕುರಿತಾಗಿ ಎನ್‍ಸಿಬಿ ಅಧಿಕಾರಿಗಳು ಸಂಪೂರ್ಣ ಮಾಹಿತಿ ಕಲೆಹಾಕಿದ್ದು, ಬೆಂಗಳೂರಿಗೆ ಕೆಲಸೆಕ್ಕೆಂದು ಬಂದವಳು ಡ್ರಗ್ ಪೆಡ್ಲರ್ ಆಗಿ ಮಾರ್ಪಟ್ಟಿದ್ದಾಗಿ ಮಾಹಿತಿ ಬಹಿರಂಗವಾಗಿದೆ.

ಕೆಲ ದಿನಗಳ ಹಿಂದೆ ಎನ್‍ಸಿಬಿ ಅಧಿಕಾರಿಗಳು ಡ್ರಗ್ ದಂಧೆಯಲ್ಲಿ ಭಾಗಿಯಾಗಿದ್ದ ಮೂವರನ್ನು ಬಂಧಿಸಿದ್ದರು. ಇವರು ಕನ್ನಡ ಚಿತ್ರರಂಗದ ನಟ-ನಟಿಯರಿಗೂ ಡ್ರಗ್ ಪೂರೈಕೆ ಮಾಡುತ್ತಿದ್ದರು ಎಂಬ ಮಾಹಿತಿ ಹೊರಬಂದಿತ್ತು. ಈಗ ಅದರಲ್ಲಿ ಬಂಧಿತಳಾದ ಲೇಡಿ ಕಿಂಗ್‍ಪಿನ್ ಅನಿಕಾಳ ಮಾಹಿತಿಯನ್ನು ಎನ್‍ಸಿಬಿ ಅಧಿಕಾರಿಗಳು ಕಲೆಹಾಕಿದ್ದಾರೆ.

ಡ್ರಗ್ ಡೀಲರ್ ಕಿಂಗ್ ಪಿನ್ ಅನಿಕಾ, ಮೂರು ಹೆಸರಲ್ಲಿ ಡ್ರಗ್ ಮಾರಾಟ ಮಾಡುತ್ತಿದ್ದಳು. ಅನಿಕಾ ಡಿ, ಅನಿ ಮತ್ತು ಬಿಮನಿ ಎಂಬ ಹೆಸರಿನಿಂದ ಪರಿಚಯಿಸಿಕೊಂಡು ಡ್ರಗ್ ಡೀಲ್ ಮಾಡುತ್ತಿದ್ದಳು. ವಾಟ್ಸಪ್, ಟೆಲಿಗ್ರಾಮ್ ಗಳ ಮೂಲಕ ಬಿಮನಿ ಎಂಬ ಹೆಸರು ಬಳಸಿ ಸ್ಟಾರ್ ನಟರನ್ನು ಸಂಪರ್ಕ ಮಾಡುತ್ತಿಳು.

ಈಕೆ ತಮಿಳುನಾಡಿನ ಸೇಲಂ ಮೂಲದವಳಾಗಿದ್ದು, ಹೋಟೆಲ್ ಮ್ಯಾನೇಜ್ ಮೆಂಟ್ ಕೋರ್ಸ್ನ್ನು ಅರ್ಧಕ್ಕೆ ಬಿಟ್ಟು ಬೆಂಗಳೂರಿಗೆ ಕೆಲಸ ಹುಡುಕಿಕೊಂಡು ಬಂದಿದ್ದಳು. ಬಳಿಕ ದೊಡ್ಡಗುಬ್ಬಿಯಲ್ಲಿ ಐಶ್ವರ್ಯ ನಿಲಯದಲ್ಲಿ ವಾಸವಾಗಿದ್ದು, ಇಲ್ಲಿಂದಲೇ ಡ್ರಗ್ ದಂಧೆ ನಡೆಸುತ್ತಿದ್ದಳು ಎಂದು ತಿಳಿದುಬಂದಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button