Latest

ಬಬ್ಲಿ ಹತ್ಯೆ ಆರೋಪಿಗಳ ಮೇಲೆ ಪೊಲಿಸ್ ಫೈರಿಂಗ್

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಯೂನಿಯನ್ ಬ್ಯಾಂಕ್ ಶಾಖೆಗೆ ನುಗ್ಗಿ ರೌಡಿಶೀಟರ್ ಹತ್ಯೆ ನಡೆಸಿದ್ದ ಆರೋಪಿಗಳ ಮೆಲೆ ಪೊಲೀಸರು ಗುಂಡಿನ ದಾಳಿ ನಡೆಸಿದ್ದು, ಇಬ್ಬರು ಆರೋಪಿಗಳನ್ನು ಬೆಂಗಳೂರಿನ ಕೋರಮಂಗಲ ಠಾಣೆ ಪೊಲೀಸರು ಬಂಧಿಸಿದ್ದಾರೆ.

ರೌಡಿಶೀಟರ್ ಬಬ್ಲಿ ಜುಲೈ 19ರಂದು ಬ್ಯಾಂಕ್ ಗೆ ಪತ್ನಿಯೊಂದಿಗೆ ಬಂದಿದ್ದ ವೇಳೆ ಬ್ಯಾಂಕ್ ನಲ್ಲೇ ಆತನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಕೃತ್ಯದ ಬಳಿಕ ಆರೋಪಿಗಳಾದ ಪ್ರದೀಪ್ ಹಾಗೂ ರವಿ ತಲೆಮರೆಸಿಕೊಂಡಿದ್ದರು.

ಆರೋಪಿಗಳ ಸುಳಿವು ಪಡೆದ ಪೊಲಿಸರು ಸ್ಥಳಕ್ಕೆ ತೆರಳಿದ್ದ ವೇಳೆ ಪೊಲೀಸರ ಮೇಲೆ ಹಲ್ಲೆ ನಡೆಸಲು ಯತ್ನಿಸಿದ್ದಾರೆ. ಈ ವೇಳೆ ಆತ್ಮರಕ್ಷಣೆಗಾಗಿ ಕೋರಮಂಗಲ ಠಾಣೆ ಇನ್ಸ್ ಪೆಕ್ಟರ್ ರವಿ ಹಾಗೂ ಸಬ್ ಇನ್ಸ್ ಪೆಕ್ಟರ್ ಸಿದ್ದಪ್ಪ ಆರೋಪಿಗಳ ಇಬ್ಬರ ಕಾಲಿಗೆ ಗುಂಡು ಹಾರಿಸಿದ್ದು, ಬೇಗೂರು ಕೆರೆ ಬಳಿ ಆರೋಪಿ ಪ್ರದೀಪ್ ಹಾಗೂ ರವಿ ಇಬ್ಬರನ್ನು ಬಂಧಿಸಿದ್ದಾರೆ.
ಯಡಿಯೂರಪ್ಪಗೆ ಮತ್ತೆ ದೆಹಲಿಗೆ ಬುಲಾವ್: ಜು.25ರಂದು ಕೇವಲ ಭೋಜನಕೂಟ

Home add -Advt

Related Articles

Back to top button