Latest

2ನೇ ಬಾರಿ ನಟನನ್ನು 3 ಗಂಟೆಗಳ ಕಾಲ ವಿಚಾರಣೆ ನಡೆಸಿದ ಸಿಸಿಬಿ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಡ್ರಗ್ಸ್ ಪ್ರಕರಣ ಸಂಬಂಧ ಎರಡನೇ ಬಾರಿಗೆ ಸಿಸಿಬಿ ವಿಚಾರಣೆಗೆ ಹಾಜರಾಗಿದ್ದ ನಟ ದಿಗಂತ್ ವಿಚಾರಣೆ ಅಂತ್ಯವಾಗಿದ್ದು, ಸಿಸಿಬಿ ಅಧಿಕಾರಿಗಳು ಮತ್ತೆ ವಿಚಾರಣೆಗೆ ಕರೆದರೆ ಮತ್ತೆ ಹಾಜರಾಗುತ್ತೇನೆ. ಅಧಿಕಾರಿಗಳ ತನಿಖೆಗೆ ಸಹಕರಿಸಲು ಸಿದ್ಧ ಎಂದಿದ್ದಾರೆ.

ಸತತ ಮೂರು ಗಂಟೆಗಳ ವಿಚಾರಣೆ ಬಳಿಕ ಸಿಸಿಬಿ ಕಚೇರಿಯಿಂದ ಹೊರ ಬಂದ ನಟ ದಿಗಂತ್, ಪ್ರಕರಣದ ತನಿಖೆ ನಡೆಯುತ್ತಿದೆ ಹೀಗಾಗಿ ಹೆಚ್ಚಿನ ಪ್ರತಿಕ್ರಿಯೆ ನೀಡಲು ಸಾಧ್ಯವಿಲ್ಲ. ವಶಕ್ಕೆ ಪಡೆದಿದ್ದ ಮೊಬೈಲ್ ವಾಪಸ್ ನೀಡಿದ್ದಾರೆ ಎಂದರು.

Related Articles

ಇನ್ನು ಪ್ರಕರಣದ ಬಗ್ಗೆ ನಮ್ಮ ಬಗ್ಗೆ ಪ್ರಸಾರ ಮಾಡುತ್ತಿರುವ ಸುದ್ದಿಗಳಲ್ಲಿ ಸಾಕಷ್ಟು ಸುಳ್ಳಿದೆ. ನೀವು ಅಂದುಕೊಂಡ ಹಾಗೆ ಏನೂ ಇಲ್ಲ. ವಿಚಾರಣೆಗೆ ಮತ್ತೆ ಸಿಸಿಬಿ ಅಧಿಕರಿಗಳು ಕರೆದರೆ ಬರಲು ಸಿದ್ಧ ಎಂದು ತಿಳಿಸಿದರು.

Home add -Advt

Related Articles

Back to top button