Latest

48 ಗಂಟೆಯೊಳಗೆ ಅರೆಸ್ಟ್ ಆಗ್ತಾರಾ ಸ್ಯಾಂಡಲ್ ವುಡ್ ನ ಮತ್ತೋರ್ವ ಸ್ಟಾರ್…?

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಸ್ಯಾಂಡಲ್ ವುಡ್ ಗೆ ಡ್ರಗ್ಸ್ ಜಾಲದ ನಂಟು ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನು 48 ಗಂಟೆಗಳಲ್ಲಿ ಮತ್ತೋರ್ವ ಖ್ಯಾತ ನಟ ಅಥವಾ ನಟಿಯ ಬಂಧನವಾಗಲಿದೆ ಕಾದುನೋಡಿ ಎಂದು ಸಾಮಾಜಿಕ ಹೋರಾಟಗಾರ ಪ್ರಶಾಂತ್ ಸಂಬರಗಿ ಹೇಳಿದ್ದಾರೆ.

ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಸಂಬರಗಿ, ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂದಿನ 48 ಗಂಟೆಯಲ್ಲಿ ಮತ್ತೋರ್ವ ಸ್ಟಾರ್ ಬಂಧನವಾಗಲಿದೆ. ಈ ಬಗ್ಗೆ ನನಗೆ ಪೊಲೀಸರಾಗಲಿ, ಅಥವಾ ಬೇರೆ ಯಾವುದೇ ಮೂಲಗಳಿಂದ ಮಾಹಿತಿ ಬಂಧಿಲ್ಲ. ಆದರೆ ಕಾಮನ್ ಸೆನ್ಸ್ ಮೂಲಕ ಹೇಳುತ್ತಿದ್ದೇನೆ. ಶೀಘ್ರದಲ್ಲೇ ಮತ್ತೋರ್ವ ನಟ ಅಥವಾ ನಟಿ ಅರೆಸ್ಟ್ ಆಗುವ ಮೂಲಕ ಚಿತ್ರರಂಗದಲ್ಲಿನ ಇನ್ನಷ್ಟು ಕೊಳಕು ಹೊರ ಬರಲಿದೆ ಎಂದಿದ್ದಾರೆ.

Home add -Advt

ಇದೇ ವೇಳೆ ನಿರೂಪಕಿ ಅನುಶ್ರೀ ಕುರಿತು ಪರೋಕ್ಷವಾಗಿ ಟ್ವೀಟ್ ಮಾಡಿರುವ ಸಂಬರಗಿ, ಕೊರೊನಾ ಇದೆ, ಹತ್ತಿರ ಬರಬೇಡಿ.. ಇದು ಇವತ್ತು ಪ್ರದರ್ಶನ ಆಗಲಿರೋ ಹೊಸಾ ಡ್ರಾಮಾ. ಪೊಲೀಸರು ತನ್ನನ್ನು ಬಂಧಿಸುತಾರೆ ಎಂದು ಗೊತ್ತಾದ ತಕ್ಷಣಕ್ಕೆ ಶುರು ಆಗುತ್ತೆ ನಾಟಕ ರಾಣಿಯ ಹೊಸ ಅವತಾರ ಎಂದು ತಿಳಿಸಿದ್ದಾರೆ.

 

Related Articles

Back to top button