Latest

ಮುತ್ತಪ್ಪ ರೈ ಪುತ್ರ ಸಿಸಿಬಿ ವಶಕ್ಕೆ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ಇದೀಗ ಭೂಗತ ಲೋಕದ ಮಾಜಿ ದೊರೆ ದಿ.ಮುತ್ತಪ್ಪ ರೈ ಪುತ್ರ ರಿಕ್ಕಿ ರೈನನ್ನು ವಶಕ್ಕೆ ಪಡೆದಿದ್ದಾರೆ.

ಡ್ರಗ್ಸ್ ಪೆಡ್ಲರ್ ಜೊತೆ ರಿಕ್ಕಿ ರೈ ಸಂಪರ್ಕ ಹೊಂದಿದ್ದ ಅಲ್ಲದೇ ಪ್ರಕರಣದ ಆರೋಪಿ ಆದಿತ್ಯ ಆಳ್ವ ತಲೆಮರೆಸಿಕೊಳ್ಳಲು ರಿಕ್ಕಿ ಸಹಾಯಮಾಡಿದ್ದ ಎಂಬ ಆರೋಪ ಕೇಳಿಬಂದಿದೆ. ಈ ಹಿನ್ನಲೆಯಲ್ಲಿ ಸಿಸಿಬಿ ಪೊಲೀಸರು ಮುತ್ತಪ್ಪ ರೈ ಅವರ ಬಿಡದಿ ನಿವಾಸ ಹಾಗೂ ರಿಕ್ಕಿ ರೈ ಅವರ ಸದಾಶಿವನಗರದಲ್ಲಿರುವ ನಿವಾಸದ ಮೇಲೆ ದಾಳಿ ನಡೆಸಿದ್ದರು.

Home add -Advt

ವಿಚಾರಣೆಗೆ ಸರಿಯಾಗಿಸ್ಪಂದಿಸದ ಹಿನ್ನೆಲೆಯಲ್ಲಿ ರಿಕ್ಕಿ ರೈಯನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇದೇ ವೇಳೆ ಮುತ್ತಪ್ಪ ರೈ ಅವರ ಹೆಸರಲ್ಲಿದ್ದ ಫಾರ್ಚುನರ್ ಕಾರನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿದುಬಂದಿದೆ.

Related Articles

Back to top button