Latest

ಡ್ರಗ್ಸ್ ಕೇಸ್; ಟಿವಿ ವರದಿಗಾರನ ಬರ್ಬರ ಹತ್ಯೆ

ಪ್ರಗತಿವಾಹಿನಿ ಸುದ್ದಿ; ಚೆನ್ನೈ: ಡ್ರಗ್ಸ್ ಪ್ರಕರಣದಲ್ಲಿ ತಮ್ಮ ಹೆಸರನ್ನು ಬಯಲಿಗೆಳೆಯಲಿದ್ದಾರೆ ಎಂಬುದು ಗೊತ್ತಾದಂತೆ ಟಿವಿ ಚಾನಲ್ ವರದಿಗಾರರೊಬ್ಬರನ್ನು ದುಷ್ಕರ್ಮಿಗಳು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ತಮಿಳುನಾಡಿನ ಕಾಂಚೀಪುರಂ ನಲ್ಲಿ ನಡೆದಿದೆ.

ಇಸ್ರೇವೆಲ್ ಮೋಸೆಸ್ (27) ಕೊಲೆಯಾದ ವರದಿಗಾರ. ಡ್ರಗ್ಸ್ ಡೀಲರ್ ಗಳ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡುತ್ತಾರೆ ಎಂಬ ಕಾರಣಕ್ಕೆ ಮೋಸೆಸ್ ಅವರನ್ನು ಕತ್ತು ಹಿಸುಕಿ ದುಷ್ಕರ್ಮಿಗಳು ಕೊಲೆ ಮಾಡಿದ್ದಾರೆ.

ವರದಿಗಾರ ಮೋಸೆಸ್ ಗೆ ಮೊದಲು ಕರೆ ಮಾಡಿ ಮನೆಯಿಂದ ಹೊರ ಬರುವಂತೆ ಕರೆದಿದ್ದಾರೆ. ಹೊರ ಬರುತ್ತಿದ್ದಂತೆಯೇ ದಾಳಿ ನಡೆಸಿರುವ ದುಷ್ಕರ್ಮಿಗಳು, ಕತ್ತು ಹಿಸುಕಿ ಕೊಲೆ ಮಾಡಿ ಮೋಸೆಸ್ ನನ್ನು ರಸ್ತೆಯಲ್ಲಿ ಬಿಸಾಡಿ ಹೋಗಿದ್ದಾರೆ.

ಪ್ರಕಣ ಸಂಬಂಧ ಇದೀಗ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರು ರಾತ್ರಿ ವೇಳೆ ಸ್ಥಳೀಯವಾಗಿ ಡ್ರಗ್ಸ್ ಮಾರಾಟ ಮಾಡುತ್ತಿದ್ದರು ಎನ್ನಲಾಗಿದೆ.

Home add -Advt

 

Related Articles

Back to top button