Latest

ಡ್ರಗ್ಸ್ ಡೀಲರ್ ಜೊತೆ ಕಂದಾಯ ಸಚಿವರ ಫೋಟೋ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಡ್ರಗ್ಸ್ ಪ್ರಕರಣದ ಪ್ರಮುಖ ಆರೋಪಿ ರಾಹುಲ್ ಗೆ ಗಣ್ಯಾತಿಗಣ್ಯರ ಜತೆ ನಿಕಟ ಸಂಪರ್ಕವಿದೆ ಎಂಬ ಮಾಹಿತಿ ಬಹಿರಂಗವಾಗಿದೆ. ರಾಹುಲ್ ಜೊತೆ ಕಂದಾಯ ಸಚಿವ ಆರ್.ಅಶೋಕ್, ಬೆಂಗಳೂರು ಮಾಜಿ ಕಮಿಷ್ನರ್ ಭಾಸ್ಕರ್ ರಾವ್, ನಟ ಉಪೇಂದ್ರ, ಶ್ರೀನಗರ ಕಿಟ್ಟಿ ಹೀಗೆ ಹಲವರು ಇರುವ ಫೋಟೊಗಳು ವೈರಲ್ ಆಗಿದ್ದು, ಭಾರೀ ಚರ್ಚೆಗೆ ಕಾರಣವಾಗಿದೆ.

ಪ್ರಮುಖವಾಗಿ ಕಂದಾಯ ಸಚಿವ ಆರ್.ಅಶೋಕ್ ಅವರ ಜೊತೆ ಡ್ರಗ್ಸ್ ಡೀಲರ್ ರಾಹುಲ್ ಇರುವ ಫೋಟೊ ಭಾರೀ ವರಲ್ ಆಗಿದ್ದು, ಡ್ರಗ್ಸ್ ಆರೋಪಿಗಳ ಜತೆ ಪ್ರಮುಖ ರಾಜಕಾರಣಿಗಳ ನಂಟಿರುವುದು ಅಚ್ಚರಿಗೆ ಕಾರಣವಾಗಿದೆ.

ಡ್ರಗ್ಸ್ ಪ್ರಕರಣದ ಆರೋಪಿ ರಾಹುಲ್ ನಟಿ ಸಂಜನಾ ಆಪ್ತನಾಗಿದ್ದು, ಸೆ.3ರಂದು ಸಿಸಿಬಿ ಅಧಿಕಾರಿಗಳು ಆತನನ್ನು ವಶಕ್ಕೆ ಪಡೆದಿದ್ದರು. ಈತ ನೀಡಿದ ಮಾಹಿತಿ ಆಧರಿಸಿ ನಟಿ ಸಂಜನಾ ಸೇರಿದಂತೆ ಹಲವರನ್ನು ಸಿಸಿಬಿ ವಶಕ್ಕೆ ಪಡೆದಿತ್ತು.

ಇನ್ನು ಡ್ರಗ್ಸ್ ಪ್ರಕರಣದ ಆರೋಪಿ ರಾಹುಲ್ ಜೊತೆಗೆ ತಮ್ಮ ಫೋಟೋ ಇರುವ ವಿಚಾರವಾಗಿ ಪ್ರತಿಕ್ರಿಯಿಸಿರುವ ಕಂದಾಯ ಸಚಿವ ಆರ್.ಅಶೋಕ್, ರಾಹುಲ್ ಗೂ ನನಗೂ ಯಾವುದೇ ಸಂಬಂಧವಿಲ್ಲ. ಯಾವುದೋ ನಾಮಕರಣ ಕಾರ್ಯಕ್ರಮಕ್ಕೆ ಹೋದಾಗ ತೆಗೆದ ಹಳೆಯ ಫೋಟೋ ಅದು. ಬೆಂಗಳೂರು ಮಾಜಿ ಕಮಿಷ್ನರ್ ಭಾಸ್ಕರ್ ರಾವ್ ಜೊತೆಯೂ ರಾಹುಲ್ ಫೋಟೋ ತೆಗೆಸಿಕೊಂಡಿದ್ದಾನೆ. ಹಾಗಂತ ನಾವು ಅಪರಾಧಿಗಳಾ ಎಂದು ಪ್ರಶ್ನಿಸಿದ್ದಾರೆ.

Home add -Advt

Related Articles

Back to top button