ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಡ್ರಗ್ಸ್ ಜಾಲದ ನಂಟು ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಕನ್ನಡದ ಖ್ಯಾತ ನಿರೂಪಕ ಅಕುಲ್ ಬಾಲಾಜಿ, ನಟ ಸಂತೋಷ್ , ಮಾಜಿ ಕಾಂಗ್ರೆಸ್ ಶಾಸಕ ಆರ್ ವಿ ದೇವರಾಜ್ ಮಗ ಯುವರಾಜ್ಗೆ ಸಿಸಿಬಿ ನೋಟಿಸ್ ಜಾರಿ ಮಾಡಿದ್ದು, ನಾಳೆ ವಿಚಾರಣೆಗೆ ಹಾಜರಾಗುಂತೆ ಸೂಚಿಸಿದೆ.
ಡ್ರಗ್ಸ್ ಜಾಲದ ಆರೋಪಿಅಗಳ ವಿಚಾರಣೆ ವೇಳೆ ಅಕುಲ್ ಬಾಲಾಜಿ ಹೆಸರು ಕೇಳಿ ಬಂದ ಹಿನ್ನೆಲೆ ಅವರಿಗೆ ನೋಟಿಸ್ ನೀಡಲಾಗಿದೆ. ನೋಟಿಸ್ಗೆ ಈಗಾಗಲೇ ಪ್ರತಿಕ್ರಿಯೆ ನೀಡಿರುವ ಅಕುಲ್ ಬಾಲಾಜಿ, ವಾಟ್ಸಾಪ್ ಮೂಲಕ ನನಗೆ ನೋಟಿಸ್ ಸಿಕ್ಕಿದೆ. ಸದ್ಯ ನಾನು ಹೈದ್ರಾಬಾದ್ನಲ್ಲಿದ್ದು, ನಾಳೆಯೇ ವಿಚಾರಣೆಗೆ ಹಾಜರಾಗುವುದಾಗಿ ಪೊಲೀಸರಿಗೆ ಉತ್ತರಿಸಿದ್ದೇನೆ ಎಂದಿದ್ದಾರೆ.
ಇನ್ನು ನಟ ಸಂತೋಷ್ ಸಂಜನಾ ಜತೆ ಹಲವು ಪಾರ್ಟಿಗಳಲ್ಲಿ ಕಾಣಿಸಿಕೊಂಡಿದ್ದ. ಸಂತೋಷ್ ಕೂಡ ನಾಳೆ ವಿಚಾರಣೆಗೆ ಹಾಜರಾಗುವ ಸಾಧ್ಯತೆಯಿದೆ.
ಇನ್ನು ಸುಧಾಮನಗರ ಕಾರ್ಪೋರೇಟರ್ ಆರ್ವಿ ದೇವರಾಜ್ ಮಗ ಆರ್ವಿ ಯುವರಾಜ್ಗೆ ನೋಟಿಸ್ ನೀಡಿರುವುದರಿಂದ ಚಿತ್ರರಂಗದ ಜೊತೆ ರಾಜಕೀಯ ನಾಯಕರ ಹೆಸರು ಕೂಡ ಈ ಪ್ರಕರಣದಲ್ಲಿ ಕೇಳಿಬರುತ್ತಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಯುವರಾಜ್, ತನಿಖೆಗೆ ನನ್ನ ಸಂಪೂರ್ಣ ಸಹಕಾರ ಇದೆ, ನನ್ನ ಹೆಸರು ಈ ಪ್ರಕರಣದಲ್ಲಿ ಯಾಕೆ ಬಂತು ಗೊತ್ತಿಲ್ಲ ಎಂದಿದ್ದಾರೆ, ದಿಂಗತ್ ಐಂದ್ರಿತಾ, ರಾಗಿಣಿ ವಿರೇನ್ ಖನ್ನಾ ಯಾರ ಜೊತೆ ಕೂಡ ನನ್ನ ಒಡನಾಟವಿಲ್ಲ. ಬೇಕಾದಲ್ಲಿ ನನ್ನ ಕಾಲ್ ಡೀಟೈಲ್ ತೆಗೆದು ನೋಡಲಿ ಎಂದು ಹೇಳಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ