ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಡ್ರಗ್ಸ್ ಮಾಫಿಯಾ ವಿರುದ್ಧ ಸಿಸಿಬಿ ಪೊಲೀಸರು ಕಾರ್ಯಾಚರಣೆ ಮುಂದುವರೆಸಿದ್ದು, ಇಂದು ಮತ್ತೋರ್ವ ಪೆಡ್ಲರ್ ನನ್ನು ಬೆಂಗಳೂರಿನಲ್ಲಿ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಪೆಡ್ಲರ್ ನೈಜೀರಿಯನ್ ಮೂಲದ ಒಸ್ಸಿ ಎಂದು ಗುರುತಿಸಲಾಗಿದೆ. ಈತ ಡ್ರಗ್ಸ್ ಪ್ರಕರಣದ ಪ್ರಮುಖ ಆರೋಪಿ ಲೂಮ್ ಪೆಪ್ಪರ್ ಜೊತೆ ಸಂಪರ್ಕದಲ್ಲಿದ್ದು, ಲೂಮ್ ಪೆಪ್ಪರ್ ಗೆ ಸಬ್ ಪೆಡ್ಲರ್ ಆಗಿ ಕೆಲಸ ಮಾಡುತ್ತಿದ್ದ.
ಬಂಧಿತ ನೈಜಿರಿಯನ್ ಪ್ರಜೆಯಿಂದ ಎಂಡಿಎಂ ಡ್ರಗ್ಸ್ ಮಾತ್ರೆಗಳನ್ನು ವಶಕ್ಕೆ ಪಡೆಯಲಾಗಿದೆ. ಲೂಮ್ ಪೆಪ್ಪರ್ ನಿಂದ ಡ್ರಗ್ಸ್ ಗಳನ್ನು ಪಡೆದು, ರಾಜಕಾರಿಣಿಗಳ ಮಕ್ಕಳು ಸೇರಿದಂತೆ ಹಲವರಿಗೆ ಈತ ಡ್ರಗ್ಸ್ ಸಪ್ಲೈ ಮಾಡುತ್ತಿದ್ದ ಎಂದು ತಿಳಿದುಬಂದಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ