ಪ್ರಗತಿವಾಹಿನಿ ಸುದ್ದಿ, ಚನ್ನಮ್ಮನ ಕಿತ್ತೂರು: ಐತಿಹಾಸಿಕ ಪಟ್ಟಣದಲ್ಲಿ ಪ್ರಪ್ರಥಮ ಬಾರಿಗೆ ನವರಾತ್ರಿ ದಸರಾ ಮಹೊತ್ಸವ ಅಂಗವಾಗಿ ಸಮಸ್ತ ಯುವ ಜನತೆಯ ನೇತೃತ್ವದಲ್ಲಿ ದುರ್ಗಾಮಾತಾ ದೌಡ್ ನಡೆಯುತ್ತಿದೆ.
೪ ನೇ ದಿನವಾದ ಭಾನುವಾರ ಜ್ಯೋತಿಯಾತ್ರೆ ಹಾಗೂ ಭವ್ಯ ಮೆರವಣಿಗೆ ನೆರವೇರಿತು.
ಐತಿಹಾಸಿಕ ಕೋಟೆ ಆವರಣದಲ್ಲಿನ ಗ್ರಾಮದೇವಿ ಗುಡಿಯಿಂದ ಸೋಮವಾರ ಪೇಟೆ, ಹುಬ್ಬಳ್ಳಿ ಓಣಿಯ ಮುಖಾಂತರ ಮದ್ದೂರ ದೇವಸ್ಥಾನಕ್ಕೆ ತೆರಳಿ ನಂತರ ಕಲ್ಗುಡಿಗೆ ಸಾಗಿ ಮುಂದೆ ಸರಪಳಿ ಓಣಿಯ ಹಣುಮಂತದೇವರ ದೇವಸ್ಥಾನಕ್ಕೆ ತೆರಳಿ ಸಮಾಪ್ತಿಯಾಯಿತು.
ಮೆರವಣಿಗೆಯುದ್ದಕ್ಕೂ ನೂರಾರು ಯುವಕರು ಶ್ರದ್ಧೆಯಿಂದ ಭಾಗವಹಿಸಿ ದೇವಿಗೆ ಜಯಕಾರ ಹೇಳಿದರು. ಪ್ರತಿಯೊಂದು ಮನೆಯ ಮಹಿಳೆಯರು ಆರತಿ ಮಾಡಿ ಜ್ಯೋತಿಗೆ ನಮಸ್ಕರಿಸಿದರು.
ಈ ಮೆರವಣಿಗೆಯಲ್ಲಿ ಪಾಲ್ಗೋಳ್ಳುವವರು ಕೆಸರಿ ಪೇಟಾ, ಟೋಪಿ, ಬಿಳಿಯ ಸಮವಸ್ತ್ರ ಹಾಗೂ ಪಾದರಕ್ಷೆ ರಹಿತವಾಗಿ ಪಲ್ಗೊಳ್ಳುವುದು ವಿಶೇಷವಾಗಿದೆ. ಬೆಳಿಗ್ಗೆ ೫ ಘಂಟೆಯಿಂದ ೯ ಘಂಟೆಯವರೆಗೆ ಕಾರ್ಯಕ್ರಮ ಜರುಗಿತು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ