Karnataka NewsLatest

ಅಂಕಲಿಮಠದ ಶ್ರೀಗಳಿಗೆ ದಸರಾ ಗೌರವ

ಪ್ರಗತಿವಾಹಿನಿ ಸುದ್ದಿ,  ಹುಕ್ಕೇರಿ : ಹುಕ್ಕೇರಿ ಹಿರೇಮಠ ಅದು ಶ್ರದ್ದೆಯ ಮಠ. ಭಾವೈಕ್ಯತೆಯ ಮಠ. ಎಲ್ಲರನ್ನೂ ಬೆಳೆಸುವ ಮಠ. ಎಲ್ಲರೊಂದಿಗೆ ಬೆರೆಯುವ ಮಠ. ಈ ಮಠದ  ಸ್ವಾಮಿಗಳು ಎಲ್ಲಾ ಸಂಪ್ರದಾಯವನ್ನು ಎಲ್ಲಾ ಸಮುದಾಯವನ್ನು ಪ್ರೀತಿಸುವುದರ ಜೊತೆಜೊತೆಗೆ ಪರಿಸರ ಪ್ರಜ್ಞೆ , ಪ್ಲಾಸ್ಟಿಕ್ ಮುಕ್ತ ಭಾರತದ ಅರಿವು, ಎಲ್ಲದಕ್ಕಿಂತ ಹೆಚ್ಚಾಗಿ ನಾಡ ಪ್ರೇಮ, ದೇಶ ಭಕ್ತಿಯನ್ನು ಭಿತ್ತುತ್ತಿರುವುದು ಎಲ್ಲಾ ಮಠಗಳಿಗೆ ಮಾದರಿ ಎಂದು ಅಂಕಲಿಯ ಮಠದ ತ್ರಿವಿಧ ದಾಸೋಹಿ ಬ್ರಹ್ಮಶ್ರೀ ಫಕೀರೇಶ್ವರ ಮಹಾಸ್ವಾಮಿಗಳು ಹೇಳಿದರು.
ಹುಕ್ಕೇರಿ ಹಿರೇಮ ಹುಕ್ಕೇರಿ ಹಿರೇಮಠದ ದಸರಾ ಉತ್ಸವದಲ್ಲಿ ಪಾಲ್ಗೊಂಡು ದಸರಾ ಗೌರವವನ್ನು ಸ್ವೀಕರಿಸಿ ಮಾತನಾಡುತ್ತಾ ಮಠ-ಮಂದಿರಗಳ ಬಗ್ಗೆ ಜನರಿಗೆ ವಿಶೇಷ ಗೌರವವಿದೆ. ಮಠಮಾನ್ಯಗಳು ಎಲ್ಲರಿಗೂ ಸಮಾನತೆಯ ಮಾರ್ಗದರ್ಶನ ಮಾಡುವ ಅವಶ್ಯಕತೆ ಇದೆ. ಠದ ದಸರಾ ಉತ್ಸವದಲ್ಲಿ ಪಾಲ್ಗೊಂಡು ದಸರಾ ಗೌರವವನ್ನು ಸ್ವೀಕರಿಸಿ ಮಾತನಾಡುತ್ತಾ ಮಠ-ಮಂದಿರಗಳ ಬಗ್ಗೆ ಜನರಿಗೆ ವಿಶೇಷ ಗೌರವವಿದೆ. ಮಠಮಾನ್ಯಗಳು ಎಲ್ಲರಿಗೂ ಸಮಾನತೆಯ ಮಾರ್ಗದರ್ಶನ ಮಾಡುವ ಅವಶ್ಯಕತೆ ಇದೆ. ಈ ಕಾರ್ಯ  ಶ್ರೀಮಠದಿಂದ ಆಗುತ್ತಿರುವುದು ಅಭಿಮಾನದ ಸಂಗತಿ ಎಂದರು.
ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಮಾತನಾಡುತ್ತಾ ಪುರಾಣ ಪ್ರವಚನಗಳು ಮನಸ್ಸನ್ನು ಅರಳಿಸುತ್ತವೆ. ಭಕ್ತಿ ಶ್ರದ್ಧೆಯನ್ನು ಕಲಿಸುತ್ತವೆ. ಆ ಕಾರ್ಯ ಇವತ್ತು ಶ್ರೀಮಠದಿಂದ ನಡೆಯುತ್ತಿದೆ. ಅಂಕಲಿಯಮಠ ದೇವಿಯನ್ನೇ ಪ್ರತ್ಯಕ್ಷ ಮಾಡಿಸಿಕೊಂಡಿರುವಂತಹ ಮಠ. ಅಂತಹ ಮಠದ ಶಾಖೆಗಳು ಎಲ್ಲಾ ಕಡೆಗೆ ಇವೆ. ದೇವಿ ಪುರಾಣವನ್ನು ರಚಿಸಿದ ಸಿದ್ಧಪರ್ವತ ದಲ್ಲಿಯೂ ಕೂಡಾ  ಅಂಕಲಿಮಠದ ಶಾಖೆ ಇದೆ. ಅಂದಮೇಲೆ ಇವತ್ತು ಸ್ವತಃ ಸಿದ್ಧಪರ್ವತದಿಂದಲೇ ಬಗಳಾಂಬಿಕೆ ಬಂದಿದ್ದಾಳೆ ಎನ್ನುವ ಭಾವನೆ ನನ್ನದು ಎಂದರು.
 ಹುಬ್ಬಳ್ಳಿಯ ಹೇಮರಾಜ ಶಾಸ್ತ್ರಿಗಳು ಹೇಮರೆಡ್ಡಿ ಮಲ್ಲಮ್ಮ ಪುರಾಣ ಪ್ರವಚನವನ್ನು ನೆರವೇರಿಸಿಕೊಟ್ಟರು. ಹುಕ್ಕೇರಿ ಹಿರೇಮಠದ ಗುರುಕುಲ ವಟುಗಳಿಂದ ವೇದಘೋಷ ಮಾಡಿದರು. ಕಾರ್ಯಕ್ರಮಕ್ಕಿಂತ ಮುನ್ನ ನಿತ್ಯದ ಪದ್ಧತಿಯಂತೆ ಗುರುಶಾಂತೇಶ್ವರ ರಥೋತ್ಸವ ದೇವಿಯ ಪಲ್ಲಕ್ಕಿ ಉತ್ಸವ ಜರುಗಿತು. ಹಾಗೆಯೇ ಚಂಡಿಕಾಯಾಗ ವಿದ್ವಾನ್ ಚಂದ್ರಶೇಖರ ಶಾಸ್ತ್ರಿಗಳು, ಸಂಪತ್  ಕುಮಾರ ಶಾಸ್ತ್ರಿಗಳ ನೇತೃತ್ವದಲ್ಲಿ ಜರುಗಿತು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button