ಪ್ರಗತಿವಾಹಿನಿ ಸುದ್ದಿ, ಶ್ರೀನಗರ: ಕಾರ್ಗಿಲ್ನಲ್ಲಿ ಇಂದು ಬೆಳಗ್ಗೆ ಭೂಕಂಪನ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 4.7 ತೀವ್ರತೆ ದಾಖಲಾಗಿದೆ.
7.30ರ ಸುಮಾರಿಗೆ ಲಡಾಖ್‌ನ ಉತ್ತರಕ್ಕೆ 401 ಕಿ.ಮೀ ದೂರದಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ.
ಈ ಹಿಂದೆ ಜೂನ್ 18 ರಂದು 24 ಗಂಟೆಗಳಲ್ಲಿ ಮೂರು ಭೂಕಂಪಗಳು ಲಡಾಕ್‌ನಲ್ಲಿ ಸಂಭವಿಸಿದ್ದವು. ಜೂನ್ 18 ರಂದು ಲಡಾಖ್‌ನ ಲೇಹ್ ಜಿಲ್ಲೆಯ ಈಶಾನ್ಯಕ್ಕೆ 279 ಕಿ.ಮೀ. ದೂರದಲ್ಲಿ ಬೆಳಗ್ಗೆ 8.28ಕ್ಕೆ 10 ಕಿ.ಮೀ ಆಳದಲ್ಲಿ ಭೂಕಂಪ ಸಂಭವಿಸಿತ್ತು.
ಅದಕ್ಕೂ ಮೊದಲು, ಮುಂಜಾನೆ, ರಿಕ್ಟರ್ ಮಾಪಕದಲ್ಲಿ 4.1 ರ ತೀವ್ರತೆಯ ಭೂಕಂಪವು ಜೂನ್ 18 ರಂದು ಲಡಾಖ್‌ನ ಲೇಹ್ ಜಿಲ್ಲೆಯ ಈಶಾನ್ಯಕ್ಕೆ 295 ಕಿ.ಮೀ. ದೂರದಲ್ಲಿ ದಾಖಲಾಗಿತ್ತಿ. ಜೂನ್ 17 ರಂದು, ರಿಕ್ಟರ್ ಮಾಪಕದಲ್ಲಿ 4.5 ರ ತೀವ್ರತೆಯ ಭೂಕಂಪವು ಲಡಾಖ್ ಅನ್ನು ರಾತ್ರಿ 9.44 ಕ್ಕೆ ಸಂಭವಿಸಿತ್ತು
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ