ಪ್ರಗತಿವಾಹಿನಿ ಸುದ್ದಿ; ಟ್ರಿನಿಡಾಡ್: ಅಂಡರ್ 19 ವಿಶ್ವಕಪ್ ಕ್ರಿಕೇಟ್ ಪಂದ್ಯ ನಡೆಯುತ್ತಿದ್ದ ಮೈದಾನದಲ್ಲಿ ಭೂಕಂಪ ಸಂಭವಿಸಿದ ಬಗ್ಗೆ ವರದಿಯಾಗಿದೆ. ರಿಕ್ಟರ್ ಮಾಪಕದಲ್ಲಿ 5.2 ತೀವ್ರತೆಯ ಭೂಕಂಪವಾಗಿದ್ದು ವೀಕ್ಷಕ ವಿವರಣೆ ನೀಡುತ್ತಿದ್ದವರು ಸಹ ಭೂ ಕಂಪವಾಗಿದ್ದನ್ನು ಉಲ್ಲೇಖಿಸಿದ್ದಾರೆ.
ಟ್ರಿನಿಡಾಡ್‌ನ ಪೋರ್ಟ್ ಆಪ್ ಸ್ಪೇನ್‌ನ ಕ್ವೀನ್ಸ್ ಪಾರ್ಕ್ ಓವಲ್ ಮೈದಾನದಲ್ಲಿ ಅಂಡರ್- 19 ವಿಶ್ವಕಪ್‌ನ ಐರ್ಲೆಂಡ್ ಮತ್ತು ಜಿಂಬಾಬ್ವೆ ನಡುವೆ ಪಂದ್ಯ ನಡೆಯುತ್ತಿದ್ದ ವೇಳೆ ಲಘು ಭೂಕಂಪ ಸಂಭವಿಸಿದೆ. ಈ ವೇಳೆ ಕ್ಯಾಮರಾ ಕೂಡ ಅಲುಗಾಡಿದ್ದು, ಭೂ ಕಂಪದ ದೃಷ್ಯ ಸೆರೆಯಾಗಿದೆ. ಐಸಿಸಿಯ ವೀಕ್ಷಕ ವಿವರಣೆಗಾರ ಆಂಡ್ರಿವ್ ಲಿಯೋನಾರ್ಡೋ ಅವರು ವೀಕ್ಷಕ ವಿವರಣೆ ನೀಡುತ್ತಿರುವಾಗಲೆ ಭೂ ಕಂಪದ ಅನುಭವ ವಿವರಿಸಿದ್ದಾರೆ.
ಇನ್ನು ಈ ಭೂಕಂಪದ ದೃಷ್ಯಗಳು ಸೋಷಿಯಲ್ ಮೀಡಿಯಾಗಳಲ್ಲೂ ವೈರಲ್ ಆಗುತ್ತಿವೆ. 2-3 ಕ್ಷಣಗಳ ಕಾಲ ಭೂಮಿ ಅಲುಗಾಡಿದ್ದು ಬಳಿಕ ಪಂದ್ಯ ಮುಂದುವರೆದಿದೆ. ಅಂತಿಮವಾಗಿ ಐರ್ಲೆಂಡ್ ತಂಡ ಜಿಂಬಾಬ್ವೆಯನ್ನು 8 ವಿಕೇಟ್‌ಗಳಿಂದ ಸೋಲಿಸಿದೆ.
ಮೂವರು IAS ಅಧಿಕಾರಿಗಳ ವರ್ಗಾವಣೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ