ಪ್ರಗತಿವಾಹಿನಿ ಸುದ್ದಿ; ನವದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪತ್ರಕರ್ತೆ ರಾಣಾ ಅಯೂಬ್ ಅವರ 1.77 ಕೋಟಿ ರೂ ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯ (ಇಡಿ) ಮುಟ್ಟುಗೋಲುಹಾಕಿದೆ.
ಸೇವೆಗಾಗಿ ನೀಡಿದ್ದ ಹಣವನ್ನು ರಾಣಾ ಅಯೂಬ್ ತಮ್ಮ ಸ್ವಂತಕ್ಕೆ ಬಳಸಿದ್ದಾರೆ ಎಂಬ ಆರೋಪ ಹಿನ್ನೆಲೆಯಲ್ಲಿ 2021ರಲ್ಲಿ ಉತ್ತರ ಪ್ರದೇಶದಲ್ಲಿ ಕೇಸ್ ದಾಖಲಾಗಿತ್ತು.
ಕೋವಿಡ್ ಸಾಂಕ್ರಾಮಿಕ ವೇಳೆ ಕೇಂದ್ರ ಸರ್ಕಾರ ಆರಂಭಿಸಿದ್ದ ಪಿಎಂ ಕೇರ್ಸ್ ಫಂಡ್ (ಪ್ರಧಾನಮಂತ್ರಿ ಪರಿಹಾರ ನಿಧಿ) ತೆರೆದು ದೇಣಿಗೆ ಸಂಗ್ರಹಿಸಿತ್ತು. ಪಿಎಂ ಕೇರ್ಸ್ ಫಂಡ್ ಪಾರದರ್ಶಕತೆ ಬಗ್ಗೆ ವಿಪಕ್ಷಗಳ ಜತೆ ಧ್ವನಿಯೆತ್ತಿದ್ದ ರಾಣಾ ಅಯೂಬ್, ತಾನೇ ಖುದ್ದಾಗಿ ಪಿಎಂ ಕೇರ್ಸ್ ನಿಧಿಗೆ ಬರೋಬ್ಬರಿ 74.50 ಲಕ್ಷ ರೂಪಾಯಿ ಹಣ ನೀಡಿದ್ದಾರೆ ಎಂದು ಇಡಿ ಅಧಿಕಾರಿಗಳು ತಿಳಿಸಿದ್ದಾರೆ.
ರಾಣಾ ಕಳೆದ ವರ್ಷ ಕೆಟ್ಟೋ ಎಂಬ ಆನ್ ಲೈನ್ ಕ್ರೌಡ್ ಫಂಡಿಂಗ್ ಪ್ಲಾಟ್ ಫಾರ್ಮ್ ಮೂಲಕ ಕೋವಿಡ್ ಸಾಂಕ್ರಾಮಿಕದಿಂದ ಸಂಕಷ್ಟಕ್ಕೆ ಸಿಲುಕಿದ ಜನರಿಗೆ ಸಹಾಯ ಮಾಡುವುದಾಗಿ ಹೇಳಿ 2.7 ಕೋಟಿ ಹಣ ಸಂಗ್ರಹಿಸಿದ್ದರು ಎನ್ನಲಾಗಿದೆ. ಸಾರ್ವಜನಿಕ ದೇಣಿಗೆದಾರರಿಂದ ಸಂಗ್ರಹಿಸಿದ ನಿಧಿಯಲ್ಲಿ ಅಕ್ರಮ ನಡೆದಿದೆ ಎಂದಿರುವ ಇಡಿ, ಆನ್ ಲೈನ್ ಮೂಲಕ ಸಂಗ್ರಹ ಮಾಡಿದ್ದ 50 ಲಕ್ಷ ರೂಪಾಯಿ ಹಣವನ್ನು ತಮ್ಮ ವೈಯಕ್ತಿಕ ಅಕೌಂಟ್ ನಲ್ಲಿ ನಿಶ್ಚಿತ ಠೇವಣಿ ಮಾಡಿದ್ದರು ಎಂದು ಇಡಿ ಹೇಳಿದೆ.
ಇದೀಗ ಅಕ್ರಮ ಹಣ ವರ್ಗಾವಣೆ ಆರೋಪದ ಮೇರೆಗೆ ರಾಣಾ ಅಯೂಬ್ ಅವರಿಗೆ ಸೇರಿದ 1.77 ಕೋಟಿ ಮೊತ್ತದ ಬ್ಯಾಂಕ್ ಠೇವಣಿಯನ್ನು ಇಡಿ ಮುಟ್ಟುಗೋಲು ಹಾಕಿಕೊಂಡಿದೆ.
ಹಿಜಾಬ್ ವಿವಾದ; ಹೈಕೋರ್ಟ್ ಅಧಿಕೃತ ಆದೇಶ ಪ್ರಕಟ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ