Kannada NewsLatestNational
*BREAKING: ಕೆಮ್ಮಿನ ಸಿರಪ್ ಕಂಪನಿ ಮಾಲೀಕನಿಗೆ ED ಶಾಕ್: ಏಳು ಸ್ಥಳಗಳಲ್ಲಿ ಅಧಿಕಾರಿಗಳ ದಿಢೀರ್ ದಾಳಿ*

ಪ್ರಗತಿವಾಹಿನಿ ಸುದ್ದಿ: ಕೆಮ್ಮಿನ ಸಿರಪ್ ನಿಂದಾಗಿ ದೇಶಾದ್ಯಂತ 24 ಮಕ್ಕಳು ಸಾವು ಪ್ರಕರಣದ ಬೆನ್ನಲ್ಲೇ ಸಿರಪ್ ಕಂಪನಿ ಮಾಲೀಕನ ಮನೆ, ಕಚೇರಿಗಳ ಮೇಲೆ ಇಡಿ ಅಧಿಕಾರಿಗಳು ದಿಢೀರ್ ದಾಳಿ ನಡೆಸಿದ್ದಾರೆ.
ಕೋಲ್ಡ್ರಿಪ್ ಸಿರಪ್ ಕಂಪನಿಯ ಮಾಲೀಕ ರಂಗನಾಥನ್ ಅವರ ಚೆನ್ನೈನಲ್ಲಿರುವ ಕಂಪನಿ, ಮನೆ, ಕಚೇರಿಗಳ ಮೇಲೆ ದಾಳಿ ನಡೆಸಲಾಗಿದೆ. ಶ್ರೀಸನ್ ಫಾರ್ಮಾಸ್ಯುಟಿಕಲ್ ಕಂಪನಿ ಸೇರಿದಂತೆ 7 ಸ್ಥಳಗಳಲ್ಲಿ ಜಾರಿ ನಿರ್ದೇಶನಾಲಯ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.
ಈಗಾಗಲೇ ಕಂಪನಿ ಮಾಲೀಕ ರಂಗನಾಥನ್ ಅವರನ್ನು ಬಂಧಿಸಲಾಗಿದೆ. ಕೋಲ್ಡ್ರಿಪ್ ಸಿರಪ್ ನಿಂದಾಗಿ ದೇಶದ ಹಲವೆಡೆ 24 ಜನ ಮಕ್ಕಳು ಸಾವನ್ನಪ್ಪಿದ್ದಾರೆ. ಈ ಬೆಳವಣಿಗೆ ಬೆನ್ನಲ್ಲೇ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.