Kannada NewsKarnataka News

ಜೂ.4ಕ್ಕೆ ಜಿ.ಪಂ ವಿವಿಧ ಸ್ಥಾಯಿ ಸಮಿತಿಗಳ ಸದಸ್ಯರ ಚುನಾವಣೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ -: ಬೆಳಗಾವಿ ಜಿಲ್ಲಾ ಪಂಚಾಯತಿಯ ವಿವಿಧ ಸ್ಥಾಯಿ ಸಮಿತಿಗಳ ಸದಸ್ಯತ್ವ ಸ್ಥಾನಕ್ಕೆ ಜೂನ್ ೪ ರಂದು ಚುನಾವಣೆ ಜರುಗಲಿದೆ ಎಂದು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಡಾ. ರಾಜೇಂದ್ರ ಕೆ.ವಿ ಅವರು ತಿಳಿಸಿದ್ದಾರೆ.

  ಚುನಾವಣೆ ವೇಳಾಪಟ್ಟಿ

ಜೂನ್ ೪ ರಂದು ಚುನಾವಣೆಯು ಬೆಳಗಾವಿ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಜರುಗುವುದು. ಬೆಳಿಗ್ಗೆ ೧೦-೩೦ ಗಂಟೆಯಿಂದ ೧೧-೩೦ ಗಂಟೆಯವರೆಗೆ ನಾಮಪತ್ರಗಳನ್ನು ಸಲ್ಲಿಸುವುದು. ಬೆಳಿಗ್ಗೆ ೧೧-೩೦ ಗಂಟೆಯಿಂದ ೧೨ ಗಂಟೆಯವರೆಗೆ ನಾಮಪತ್ರಗಳ ಪರಿಶೀಲಿಸಲಾಗುವುದು.
ಮಧ್ಯಾಹ್ನ ೧೨ ಗಂಟೆಯಿಂದ ೧೨-೩೦ ಗಂಟೆಯವರೆಗೆ ಉಮೇದುವಾರಿಕೆಯನ್ನು ಹಿಂಪಡೆದುಕೊಳ್ಳಬಹುದು. ಮಧ್ಯಾಹ್ನ ೧-೩೦ ಗಂಟೆಗೆ ಸದಸ್ಯರುಗಳ ಹಾಜರಾತಿ, ನಾಮಪತ್ರಗಳು ಕ್ರಮಬದ್ಧವಾಗಿರುವ ಮತ್ತು ಅವರು ತಮ್ಮ ಉಮೇದುವಾರಿಕೆಯನ್ನು ಹಿಂತೆಗೆದುಕೊಳ್ಳದೇ ಆಯಾ ಸ್ಥಾಯಿ ಸಮಿತಿಗಳಿಗೆ ಚುನಾಯಿಸತಕ್ಕ ಸದಸ್ಯರ ಸಂಖ್ಯೆಗಳಿಗಿಂತ ಹೆಚ್ಚಿಗೆ ಇದ್ದರೆ ಗೊತ್ತುಪಡಿಸಿದ ಅಧಿಕಾರಿಯು ಚುನಾವಣೆಯನ್ನು ಗುಪ್ತ ಮತದಾನ ಪದ್ದತಿಯಂತೆ ಚುನಾವಣೆಯನ್ನು ನಡೆಸುವುದು.
ವಿವಿಧ ಸ್ಥಾಯಿ ಸಮಿತಿಗಳ ಸದಸ್ಯರ ಚುನಾವಣೆ ಮುಗಿದ ಅರ್ಧ ಗಂಟೆಯ ನಂತರ ೩ ಸ್ಥಾಯಿ ಸಮಿತಿಗಳ ಅಧ್ಯಕ್ಷರ ಚುನಾವಣೆಯನ್ನು ಜರುಗಿಸಲಾಗುವುದು ಎಂದು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button