Belagavi NewsBelgaum NewsKannada NewsKarnataka NewsPolitics

*ಬೆಳಗಾವಿ ಪತ್ರಕರ್ತರ ಸಂಘಕ್ಕೆ ಪದಾಧಿಕಾರಿಗಳ ಆಯ್ಕೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಬೆಳಗಾವಿ ಪತ್ರಕರ್ತರ ಸಂಘದ ( ಮುದ್ರಣ ಮಾಧ್ಯಮ) ಸಂಘದ ನೂತನ ಪದಾಧಿಕಾರಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.

ಗೌರವಾಧ್ಯಕ್ಷರಾಗಿ ಹೃಷಿಕೇಶ್ ಬಹದ್ದೂರ್ ದೇಸಾಯಿ , ಅಧ್ಯಕ್ಷರಾಗಿ ವಿಲಾಸ ಜೋಶಿ, ಉಪಾಧ್ಯಕ್ಷರಾಗಿ ಶ್ರೀಶೈಲ ಮಠದ, ಸಂಜಯ ಸೂರ್ಯವಂಶಿ ಆಯ್ಕೆಯಾಗಿದ್ದಾರೆ. ಗೌರವ ಸಲಹೆಗಾರರಾಗಿ ಕೇಶವ ಆದಿ, ಕೆ. ಸುರೇಶ್ ಶ್ಯಾನಬೋಗ, ಮಹೇಶ್ ವಿಜಾಪುರ, ಕಾರ್ಯದರ್ಶಿಯಾಗಿ ನೌಷಾದ ಬಿಜಾಪುರ, ಸಹ ಕಾರ್ಯದರ್ಶಿಯಾಗಿ ಸುರೇಶ್ ನೇರ್ಲಿ, ಖಜಾಂಚಿಯಾಗಿ ರವೀಂದ್ರ ಉಪ್ಪಾರ,  ಕಾರ್ಯಕಾರಿಣಿ ಸದಸ್ಯರಾಗಿ ರಾಜು ಗವಳಿ, ಮಲ್ಲಿಕಾರ್ಜುನ ಮುಗಳಿ, ಸಂತೋಷ ಚಿನಗುಡಿ, ಕೀರ್ತಿ ಕಾಸರಗೋಡು, ಮುನ್ನಾ ಬಾಗವಾನ, ಮಂಜುನಾಥ ಕೋಳಿಗುಡ್ಡ, ಸುನಿಲ್ ಪಾಟೀಲ, ಜಗದೀಶ್ ವಿರಕ್ತಮಠ, ರಾಜಶೇಖರಯ್ಯ ಹಿರೇಮಠ, ವಿನಾಯಕ ಮಠಪತಿ, ರವಿ ಗೋಸಾವಿ, ಅಶೋಕ ಮುದ್ದಣ್ಣವರ, ಅರುಣ ಯಳ್ಳೂರಕರ, ರಾಮಚಂದ್ರ ಸುಣಗಾರ, ರಜನಿಕಾಂತ್ ಯಾದವಾಡ ಅವಿರೋಧವಾಗಿ ಆಯ್ಕೆಯಾದರು.

ಈ ಸಭೆಯಲ್ಲಿ ವೇಗವಾಗಿ ಮುಂದುವರೆಯುತ್ತಿರುವ ಹಾಗೂ ಬದಲಾವಣೆ ಆಗುತ್ತಿರುವ ಮಾಧ್ಯಮ ಕ್ಷೇತ್ರದಲ್ಲಿ ನಮ್ಮತನವನ್ನು ಉಳಿಸಿಕೊಂಡು ಹೋಗುವ ನಿಟ್ಟಿನಲ್ಲಿ ‌ಚರ್ಚಿಸಲಾಯಿತು. ಇದೇ ಸಮಯದಲ್ಲಿ  ಅಭಿವೃದ್ಧಿ ಪತ್ರಿಕೋದ್ಯಮದ ವರದಿಗಾರಿಕೆ ಹಿನ್ನೆಲೆ ರಾಜ್ಯ ಸರ್ಕಾರದ ಪ್ರಶಸ್ತಿಗೆ ಭಾಜನರಾದ ಹಿರಿಯ ಪತ್ರಕರ್ತರ ನೌಷಾದ ಬಿಜಾಪುರ ಅವರನ್ನು ಗೌರವಿಸಲಾಯಿತು.

ಈ ಸಭೆಯಲ್ಲಿ ನೂತನ ಪದಾಧಿಕಾರಿಗಳು, ನಾಗರಾಜ ಎಚ್.ವಿ. ಹಿರಾಮಣಿ ಸೇರಿದಂತೆ ಹಲವರು ಭಾಗವಹಿಸಿದ್ದರು.

Home add -Advt

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button