ಪ್ರಗತಿವಾಹಿನಿ ಸುದ್ದಿ; ಚಾಮರಾಜನಗರ: ಎಲೆಕ್ಟ್ರಿಕ್ ಬೈಕ್ ಗಳ ಅವಾಂತರಗಳು ಮುಂದುವರೆದಿವೆ. ಬ್ಯಾಟರಿ ಸ್ಫೋಟಗೊಂಡು ಎಲೆಕ್ಟ್ರಿಕ್ ಬೈಕ್ ಹೊತ್ತಿ ಉರಿದಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ.
ಜಿಲ್ಲೆಯ ಕೊತ್ತಲವಾಡಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಒಂದು ವರ್ಷದ ಹಿಂದಷ್ಟೇ ಬಸವರಾಜಪ್ಪ ಎಂಬುವವರು ಈ ಎಲೆಕ್ಟ್ರಿಕ್ ಬೈಕ್ ಖರೀದಿಸಿದ್ದರು. ಇದೀಗ ಏಕಾಏಕಿ ಬೈಕ್ ಬ್ಯಾಟರಿ ಸ್ಫೊಟಗೊಂದಿದೆ.
ಓವರ್ ಹೀಟ್ ನಿಂದ ಬ್ಯಾಟರಿ ಸ್ಫೋಟಗೊಂಡಿದ್ದು, ಇಡೀ ಬೈಕ್ ಹೊತ್ತಿ ಉರಿದಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ