Belagavi NewsBelgaum News

*ಬೆಳಗಾವಿಯಲ್ಲಿ ಮತ್ತೊಂದು ಅನಾಹುತ; ವಿದ್ಯುತ್ ತಂತಿ ತಿಳಿದು ರೈತ ದುರ್ಮರಣ*

ಪ್ರಗತಿವಾಹಿನಿ ಸುದ್ದಿ: ಬೆಳಗಾವಿಯಲ್ಲಿ ಮತ್ತೊಂದು ದುರಂತ ಸಂಭವಿಸಿದೆ. ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ರೈತರೊಬ್ಬರು ಸಾವನ್ನಪ್ಪಿರುವ ದಾರುಣ ಘಟನೆ ಬೆಳಗಾವಿ ಜಿಲೆಯ ಕಿತ್ತೂರಿನಲ್ಲಿ ನಡೆದಿದೆ.

ಇಲ್ಲಿನ ಹಿರೇನದಿಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮಂಜುನಾಥ್ ದಾಸನಕೊಪ್ಪ ಎಂಬುವವರು ಜಮೀನಿಗೆ ಹೋದಾಗ ವಿದ್ಯುತ್ ತಂತಿ ತುಳಿದು ಮೃತಪಟ್ಟಿದ್ದಾರೆ.

ಬಿರುಗಾಳಿಯಿಂದ ಜಮೀನಿನಲ್ಲಿ ವಿದ್ಯುತ್ ತಂತಿ ತುಂಡಾಗಿ ಬಿದ್ದಿತ್ತು. ಇದನ್ನು ಗಮನಿಸಿದೇ ಏಕಾಏಕಿ ವಿದ್ಯುತ್ ತಂತಿ ತುಳಿದ ರೈತ ವಿದ್ಯುತ್ ಪ್ರವಹಿಸಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

Home add -Advt

Related Articles

Back to top button