
ಪ್ರಗತಿವಾಹಿನಿ ಸುದ್ದಿ: ಅದ್ದೂರಿ ಮದುವೆ ಕಾರ್ಯಕ್ರಮದಲ್ಲಿ ಮೆರವಣಿಗೆಯಲ್ಲಿ ಕುದುರೆ ಏರಿಬಂದ ವರ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಮಧ್ಯಪ್ರದೇಶದ ಶಿಯೋಪುರದಲ್ಲಿ ನಡೆದಿದೆ.
ಕುದುರೆ ಮೇಲೆ ವರ ಕುಳಿತು ರಸ್ತೆಯುದ್ದಕ್ಕೂ ಮೆರವಣಿಗೆಸಾಗುತ್ತಿದ್ದ ವೇಳೆ ಕುದುರೆ ಮೇಲಿಂದ ವರ ಏಕಾಏಕಿ ಕುಸಿದು ಕೆಳಗೆ ಬಿದ್ದಿದ್ದಾನೆ. ತಕ್ಷಣ ಕುಟುಂಬದವರು ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಅಷ್ಟರಲ್ಲಾಗಲೇ ವರ ಮೃತಪಟ್ಟಿದ್ದಾಗಿ ವೈದ್ಯರು ತಿಳಿಸಿದ್ದಾರೆ.
ಪ್ರದೀಪ್ ಸಿಂಗ್ ಮೃತ ವರ. ಮೆರವಣಿಗೆಯಲ್ಲಿ ಮೊದಲು ಭರ್ಜರಿ ಸ್ಟೆಪ್ ಹಾಕಿದ್ದ ಪ್ರದೀಪ್ ಸಿಂಗ್ ಬಳಿಕ ಕುದುರೆ ಏರಿ ಮದುವೆ ಸಮಾರಂಭದ ವೇದಿಕೆಯತ್ತ ಮೆರವಣಿಗೆಯಲ್ಲಿ ಸಾಗಿ ಬರುತ್ತಿದ್ದ. ಈ ವೇಳೆ ಕುದುರೆ ಮೇಲಿಂದ ಕುಸಿದು ಬಿದ್ದ ಪ್ರದೀಪ್ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾನೆ.