
ಪ್ರಗತಿವಾಹಿನಿ ಸುದ್ದಿ: ವಿದ್ಯುತ್ ಶಾಕ್ ಹೊಡೆದು ಅಜ್ಜಿ ಹಾಗೂ ಮೊಮ್ಮಗ ಸಾವನ್ನಪ್ಪಿರುವ ದಾರುಣ ಘಟನೆ ತುಮಕೂರಿನ ಕುಣಿಗಲ್ ತಾಲೂಕಿನ ತೊಟ್ಟಹಳ್ಳಿ ಗ್ರಾಮದಲ್ಲಿ ನಡೆದಿದೆ.
ತೋಟದಲ್ಲಿ ತಂತಿಬೇಲಿ ಮುಟ್ಟಿದಾಗ ಏಕಾಏಕಿ ಕರೆಂಟ್ ಶಾಕ್ ಹೊಡೆದಿದ್ದು, ಅಜ್ಜಿ ಹಾಗೂ ಮೊಮ್ಮಗ ಇಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅಜ್ಜಿ ಮ್ಮಯ್ಯಮ್ಮ (55) ಹಾಗೂ ಮೊಮ್ಮಗ ಮೋಹಿತ್ (12) ಮೃತ ದುರ್ದೈವಿಗಳು.
ಕುಣಿಗಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದುರಂತ ಸಂಭವಿಸಿದೆ.