Kannada NewsLatest

*ವಿದ್ಯುತ್ ಶಾಕ್; ಬಿಜೆಪಿ ಮುಖಂಡ ದುರ್ಮರಣ*

ಪ್ರಗತಿವಾಹಿನಿ ಸುದ್ದಿ; ಯಮಕನಮರಡಿ: ವಿದ್ಯುತ್ ತಂತಿ ತಗುಲಿ ಬಿಜೆಪಿ ಮುಖಂಡ ಮೃತಪಟ್ಟಿರುವ ಘಟನೆ ಬೆಳಗಾವಿ ಜಿಲ್ಲೆಯ ಯಮಕನಮರಡಿಯ ಗುಟಗುದ್ದಿ ಗ್ರಾಮದಲ್ಲಿ ನಡೆದಿದೆ.

36 ವರ್ಷದ ಬಸವರಾಜ್ ಬಸವಣ್ಣಿ ಪೂಜೇರಿ ಮೃತ ಬಿಜೆಪಿ ಮುಖಂಡ. ಬಸವರಾಜ್ ಚಿಕ್ಕೋಡಿ ಬಿಜೆಪಿ ಮಾಧ್ಯಮ ಸಂಚಾಲಕರಾಗಿದ್ದರು. ಅಲ್ಲದೇ ಶಹಾಬಂದರ ಗ್ರಾಮ ಪಂಚಾಯಿತಿ ಮಾಜಿ ಸದಸ್ಯರಾಗಿದ್ದರು.

ಗುಟಗುದ್ದಿ ಗ್ರಾಮದ ಹೊಲದಲ್ಲಿ ಪಂಪ್ ಚಾಲನೆ ಮಾಡುವಾಗ ವಿದ್ಯುತ್ ತಗುಲಿ ಬಸವರಾಜ್ ಮೃತಪಟ್ಟಿದ್ದಾರೆ. ಯಮಕನಮರಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

*ನಾನು ಇವರಂತೆ ಬಣ್ಣಬದಲಿಸುವ ರಾಜಕೀಯ ಗೋಸಂಬೆ ಅಲ್ಲ; ಬಿಜೆಪಿ ಶಾಸಕರ ವಿರುದ್ಧ ಮತ್ತೆವಾಗ್ದಾಳಿ ನಡೆಸಿದ ಬಿ.ಕೆ.ಹರಿಪ್ರಸಾದ್*

Home add -Advt

https://pragati.taskdun.com/b-k-hariprasadyatnal-bjp-govtbagalakote/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button