ಪ್ರಗತಿವಾಹಿನಿ ಸುದ್ದಿ; ಮಾಸ್ಕೋ: ಬಾತ್ ಟಬ್ ನಲ್ಲಿ ಐಫೋನ್ ಬಿದ್ದ ಪರಿಣಾಮ ವಿದ್ಯುತ್ ಪ್ರವಹಿಸಿ 24 ವರ್ಷದ ಯುವತಿ ಧಾರುಣವಾಗಿ ಸಾವನ್ನಪ್ಪಿರುವ ಘಟನೆ ರಷ್ಯಾದ ಅರ್ಖಾಂಗೆಲ್ಕಸ್ ನಗರದಲ್ಲಿ ನಡೆದಿದೆ.
ಮೃತ ಯುವತಿಯನ್ನು ಓಲೆಸ್ಯಾ ಸೆಮೆನೋವಾ ಎಂದು ಗುರುತಿಸಲಾಗಿದೆ. ಯುವತಿ ತನ್ನ ಐಫೋನ್ ನನ್ನು ಚಾರ್ಜಿಂಗ್ ಇಟ್ಟು ಪಕ್ಕದಲ್ಲಿಯೇ ಇದ್ದ ಬಾತ್ ಟಬ್ ನಲ್ಲಿ ಸ್ನಾನಕ್ಕಿಳಿದಿದ್ದಾಳೆ. ಈ ವೇಳೆ ಮೊಬೈಲ್ ವೈರ್ ನಿಂದ ಕಳಚಿ ಬಾತ್ ಟಬ್ ನೊಳಗೆ ಬಿದ್ದಿದೆ. ವಿದ್ಯುತ್ ಪ್ರವಹಿಸಿ ಬಾತ್ ಟಬ್ ನಲ್ಲೇ ಯುವತಿ ಸಾವನ್ನಪ್ಪಿದ್ದಾಳೆ.
ಅಲೆಸ್ಯಾಳ ಮೃತದೇಹವನ್ನು ಆಕೆಯ ಗೆಳತಿ ಡಾರಿಯಾ ನೋಡಿದ್ದು, ಎಮರ್ಜನ್ಸಿ ನಂಬರ್ ಗೆ ಕರೆ ಮಾಡಿದ್ದಾಳೆ. ಸ್ಥಳಕ್ಕೆ ಆಗಮಿಸಿದ ವೈದ್ಯರು ಅಲೆಸ್ಯಾ ಸಾವನ್ನಪ್ಪಿದ್ದನ್ನು ಖಚಿತಪಡಿಸಿದ್ದಾರೆ.
ಮೊಬೈಲ್ ನೀರಿನಲ್ಲಿ ಬಿದ್ದರೆ ಮೊಬೈಲ್ ಹಾಳಾಗುತ್ತದೆ ಆದರೆ ಕೆಲ ಮೊಬೈಲ್ ಗಳು ನೆಟ್ ವರ್ಕ್ ಜೊತೆ ಸಂಪರ್ಕದಲ್ಲಿದ್ದ ವೇಳೆ ನೀರಿನಲ್ಲಿ ಬಿದ್ದರೆ ವಿದ್ಯುತ್ ಪ್ರವಹಿಸುತ್ತದೆ ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ