Latest

*ಕರೆಂಟ್ ಶಾಕ್ ಗೆ ಜ್ಞಾಪಕ ಶಕ್ತಿಯನ್ನೇ ಕಳೆದುಕೊಂಡ ಬಾಲಕ*

ಪ್ರಗತಿವಾಹಿನಿ ಸುದ್ದಿ; ಕೊಪ್ಪಳ: ವಿದ್ಯುತ್ ಶಾಕ್ ಹೊಡೆದು ಬಾಲಕನೊಬ್ಬ ಜ್ಞಾಪಕ ಶಕ್ತಿಯನ್ನೇ ಕಳೆದುಕೊಂಡಿರುವ ಘಟನೆ ಕೊಪ್ಪಳ ಜಿಲೆಯ ಕಾರಟಗಿ ತಾಲೂಕಿನ ಮೈಲಾಪುರ ಗ್ರಾಮದಲ್ಲಿ ನಡೆದಿದೆ.

ಆಟದ ಮೈದಾನವೊಂದರಲ್ಲಿ ಅಕ್ರಮವಾಗಿ ವಿದ್ಯುತ್ ಬಳಸಿ ನೀರಿನ ಟ್ಯಾಂಕ್ ನಿರ್ಮಿಸಲಾಗುತ್ತಿತ್ತು. ಆಟದ ಮೈದಾನದಲ್ಲಿ ಬೇಕಾಬಿಟ್ಟಿ ವೈಯರ್ ಗಳನ್ನು ಎಸೆದಿದ್ದರು. ಅಲ್ಲಿ ಆಟವಾಡುತ್ತಿದ್ದ ಬಾಲಕ ಏಕಾಏಕಿ ವಿದ್ಯುತ್ ತಂತಿ ಸ್ಪರ್ಶಿಸಿ ಗಂಭೀರವಾಗಿ ಗಾಯಗೊಂಡಿದ್ದಾನೆ. 10 ವರ್ಷದ ಬಾಲಕ ವೀರೇಶ್ ಕೈಗೆ ಗಾಯವಾಗಿದ್ದು, ನೆನಪಿನ ಶಕ್ತಿಯನ್ನೇ ಕಳೆದುಕೊಂದಿದ್ದಾನೆ.

ಬಾಲಕ ವೀರೇಶ್ ನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಸಂಬಂಧ ಗುತ್ತಿಗೆದಾರ ಮಹದೇವಪ್ಪ ವಿರುದ್ಧ ಕಾರಟಗಿ ಪೊಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜಿಲ್ಲಾ ಪಂಚಾಯತ್ ಅಧಿಕಾರಿಗಳ ವಿರುದ್ಧವೂ ಕ್ರಮಕ್ಕೆ ಆಗ್ರಹಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ.

ಮೀಸಲಾತಿ ಪ್ರಕಟಿಸಿದ ರೀತಿಗೆ ಡಿ.ಕೆ.ಶಿವಕುಮಾರ್ ಕಿಡಿ ಕಿಡಿ

Home add -Advt

https://pragati.taskdun.com/d-k-sivakumar-lashed-out-at-the-manner-in-which-the-reservation-was-announced/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button