Belagavi NewsBelgaum NewsKannada NewsKarnataka NewsLatest

*ನಾಳೆಯಿಂದ ವಿದ್ಯುತ್ ಚಾಲಿತ ರೈಲು ಸಂಚಾರ ಪ್ರಾರಂಭ; ಸಂಸದ ಈರಣ್ಣ ಕಡಾಡಿ*

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಮೊಟ್ಟ ಮೊದಲ ವಿದ್ಯುತ್ ಚಾಲಿತ ರೈಲು ಸಂಚಾರ ನಾಳೆ ಬೆಂಗಳೂರಿನಿAದ ಬೆಳಗಾವಿಗೆ ಆರಂಭವಾಗಲಿದೆ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಹೇಳಿದರು.


ಮಂಗಳವಾರ ನ-28 ರಂದು ಪತ್ರಿಕಾ ಹೇಳಿಕೆ ನೀಡಿದ ಅವರು ಬೆಳಗಾವಿ-ಹುಬ್ಬಳ್ಳಿ ನಡುವೆ ರೈಲ್ವೆ ಮಾರ್ಗದ ವಿದ್ಯುದ್ದಿಕರಣ ಕಾಮಗಾರಿ ಪೂರ್ಣಗೊಂಡಿದ್ದು, ದಿನಾಂಕ 29.11.2023 ರಂದು ರೈಲು ಸಂಖ್ಯೆ:20653 ಬೆಂಗಳೂರು-ಬೆಳಗಾವಿ ಸೂಪರ್ ಫಾಸ್ಟ್ ಏಕ್ಸ್ಪ್ರೇಸ್ ರೈಲು ಡೀಸೆಲ್ ಎಂಜಿನ್ ಬದಲು ಎಲೆಕ್ಟ್ರಿಕ್ ಎಂಜಿನ್ ಮೂಲಕ ಸಂಚಾರ ನಡೆಸಲಿದೆ.

Home add -Advt


ದಿನಾಂಕ 30.11.2023 ರಂದು ರೈಲು ಸಂಖ್ಯೆ:20654 ಬೆಳಗಾವಿ ರೈಲು ನಿಲ್ದಾಣದಿಂದ ಮೊಟ್ಟ ಮೊದಲ ವಿದ್ಯುತ್‌ಚಾಲಿತ ರೈಲು ಪ್ರತಿದಿನ ಸಂಚಾರ ನಡೆಸಲಿದೆ. ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆ ಇಲ್ಲ. ಬರುವಂತಹ ದಿನಗಳಲ್ಲಿ ಪ್ರಯಾಣಿಕರಿಗೆ ಕಡಿಮೆ ಸಮಯದಲ್ಲಿ ಬೆಳಗಾವಿಯಿಂದ ಬೆಂಗಳೂರಿಗೆ ತಲುಪಲು ಹಾಗೂ ಬೆಂಗಳೂರಿನಿAದ ಬೆಳಗಾವಿಗೆ ಬರಲು ಸಮಯ ಉಳಿತಾಯದ ಅನುಕೂಲವಾಗಿದೆ ಎಂದರು.

Related Articles

Back to top button