ಕಾಫಿನಾಡಿನ ಕಾಫಿ ತೋಟಗಳಿಗೆ 38 ಕಾಡಾನೆಗಳ ಲಗ್ಗೆ: 50ಕ್ಕೂ ಹೆಚ್ಚು ಗ್ರಾಮಗಳಲ್ಲಿ ನಿಷೇಧಾಜ್ಞೆ, ಕಾರ್ಮಿಕರಲ್ಲಿ ಆತಂಕ

ಪ್ರಗತಿವಾಹಿನಿ ಸುದ್ದಿ: ಮಲೆನಾಡಿನ ಕಾಫಿ ತೋಟಗಳಲ್ಲಿ ಕಾಡಾನೆಗಳ ಹಿಂಡು ಬೀಡುಬಿಟ್ಟಿರುವುದು ಜನರಲ್ಲಿ ಆತಂಕ ಹೆಚ್ಚಿಸಿದೆ. ಒಂದೆಡೆ ಕಾಫಿ ಕೊಯ್ಲಿನ ಸಮಯ, ಮತ್ತೊಂದೆಡೆ ತೋಟಗಳಲ್ಲೇ ಕಾಡಾನೆಗಳ ಸಂಚಾರ. ಇದರಿಂದ ಕಾರ್ಮಿಕರು ಜೀವಭಯದಿಂದ ತೋಟಗಳಿಗೆ ತೆರಳಲು ಹಿಂದೇಟು ಹಾಕುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರ ಸುರಕ್ಷತೆಗಾಗಿ ತಾಲೂಕು ಆಡಳಿತ ಮಹತ್ವದ ಕ್ರಮ ಕೈಗೊಂಡಿದೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕು ವ್ಯಾಪ್ತಿಯಲ್ಲಿ ಒಟ್ಟು 38 ಕಾಡಾನೆಗಳು ಬೀಡುಬಿಟ್ಟಿರುವ ಹಿನ್ನೆಲೆಯಲ್ಲಿ 50ಕ್ಕೂ ಹೆಚ್ಚು ಗ್ರಾಮಗಳಲ್ಲಿ ಬಿಎನ್‌ಎಸ್ ಸೆಕ್ಷನ್ 163ರ ಅಡಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಮೂಡಿಗೆರೆ … Continue reading ಕಾಫಿನಾಡಿನ ಕಾಫಿ ತೋಟಗಳಿಗೆ 38 ಕಾಡಾನೆಗಳ ಲಗ್ಗೆ: 50ಕ್ಕೂ ಹೆಚ್ಚು ಗ್ರಾಮಗಳಲ್ಲಿ ನಿಷೇಧಾಜ್ಞೆ, ಕಾರ್ಮಿಕರಲ್ಲಿ ಆತಂಕ