Kannada NewsKarnataka NewsNationalPolitics

*ಜಗತ್ತಿನ ನಂಬರ್ 1 ಶ್ರೀಮಂತ ವ್ಯಕ್ತಿ ಎಲಾನ್ ಮಸ್ಕ್ ಅಲ್ಲ*

ಪ್ರಗತಿವಾಹಿನಿ ಸುದ್ದಿ: ಜಗತ್ತಿನ ನಂಬರ್ 1 ಶ್ರೀಮಂತ ವ್ಯಕ್ತಿಯಾಗಿದ್ದ ಎಕ್ಸ್ ಸಿಇಒ, ಮಸ್ಕ್ ಟೆಕ್ ಸಂಸ್ಥಾಪಕ ಎಲಾನ್ ಮಸ್ಕ್ ಈಗ ನಂ.2ಕ್ಕೆ ಕುಸಿದಿದ್ದಾರೆ.

ಹೌದು..‌ಕಳೆದ 1 ವರ್ಷದಿಂದ ವಿಶ್ವದ ನಂ.1 ಶ್ರೀಮಂತ ಸ್ಥಾನದಲ್ಲಿದ್ದ ಎಲಾನ್ ಮಸ್ಕ್ ಈಗ ನಂ.2ಕ್ಕೆ ಕುಸಿದಿದ್ದಾರೆ.

Home add -Advt

ಜಗತ್ತಿನ ನಂಬರ್ 1 ಶ್ರೀವಂತ ಯಾರು..?

ಒರಾಕಲ್ ಕಂಪನಿ ಸಹಸಂಸ್ಥಾಪಕ ಲ್ಯಾರಿ ಎಲ್ಲಿಸ್ಸನ್ ವಿಶ್ವದ ನಂ.1 ಶ್ರೀಮಂತ ಪಟ್ಟವನ್ನು ಬಾಚಿಕೊಂಡಿದ್ದಾರೆ. 

ಲ್ಯಾರಿ ಅವರ ಆಸ್ತಿಯು ಸೋಮವಾರ (ಸೆ.8) ಬರೋಬ್ಬರಿ 101 ಬಿಲಿಯನ್ ಡಾಲರ್ ವೃದ್ಧಿಯಾಗಿ ಅಗ್ರಸ್ಥಾನಕ್ಕೆ ಲಗ್ಗೆಯಿಟ್ಟಿದ್ದಾರೆ. ಇದರಿಂದಾಗಿ ಇವರ ಒಟ್ಟು ಆಸ್ತಿಯು 393 ಬಿಲಿಯನ್ ಡಾಲರ್‌ಗೆ (34 ಲಕ್ಷ ಕೋಟಿ ರೂ.) ಏರಿಕೆಯಾಗಿದೆ. ಎಲಾನ್ ಮಸ್ತ್ 385 ಬಿಲಿಯನ್ ಡಾಲರ್ ಆಸ್ತಿ ಹೊಂದುವ ಮೂಲಕವೇ (33 ಲಕ್ಷ ಕೋಟಿ ರೂ.) 2ನೇ ಸ್ಥಾನಕ್ಕೆ ಕುಸಿದಿದ್ದಾರೆ.

Related Articles

Back to top button