ಪ್ರಗತಿವಾಹಿನಿ ಸುದ್ದಿ, ನ್ಯೂಯಾರ್ಕ್: ಟೆಸ್ಲಾ ಸಿಇಒ ಎಲೋನ್ ಮಸ್ಕ್ ಅವರ ಮಾಜಿ ಗೆಳತಿ ಜೆನ್ನಿಫರ್ ಗ್ವಿನ್ನೆ ಅವರು ತಮ್ಮಿಬ್ಬರ ಒಂದು ವರ್ಷ ಅವಧಿಯ ಪ್ರೇಮ ಸಂಬಂಧದಲ್ಲಿ ಮಸ್ಕ್ ಉಡುಗೊರೆಯಾಗಿ ನೀಡಿದ ಫೋಟೋಗಳು ಮತ್ತು ಸ್ಮರಣಿಕೆಗಳ ಹರಾಜಿನಿಂದ 165,000 ಡಾಲರ್ (1.3 ಕೋಟಿ) ಸಂಗ್ರಹಿಸಿದ್ದಾರೆ.
1994-95 ರ ಅವಧಿಯಲ್ಲಿ ಕಾಲೇಜು ವ್ಯಾಸಂಗದ ವೇಳೆ ಎಲಾನ್ ಮಸ್ಕ್ ಹಾಗೂ ಜೆನ್ನಿಫರ್ ಗ್ವಿನ್ನೆ ಇಬ್ಬರೂ ಪರಸ್ಪರ ಪ್ರೇಮಿಸುತ್ತಿದ್ದ ಸಂದರ್ಭದಲ್ಲಿ ಮಸ್ಕ್ ಅವರು ಗೆಳತಿಗಾಗಿ ಈ ಉಡುಗೊರೆಗಳನ್ನು ನೀಡಿದ್ದರು.
ಮಸ್ಕ್ ಗ್ವಿನ್ನೆಗೆ ಹುಟ್ಟುಹಬ್ಬದ ಉಡುಗೊರೆಯಾಗಿ ನೀಡಿದ ಹಸಿರು ಪಚ್ಚೆಯೊಂದಿಗಿನ ಚಿನ್ನದ ನೆಕ್ಲೇಸ್ 51,000 ಡಾಲರ್ ಗೆ ಮಾರಾಟವಾಯಿತು. ಆದರೆ ಮಸ್ಕ್ ಅವರ ಈ ಹಿಂದೆ ನೋಡಲು ಅಲಭ್ಯವಾಗಿದ್ದ ಫೋಟೋಗಳು 21,000 ಡಾಲರ್ ವರೆಗೆ ಮಾರಾಟವಾದವು.
ಹರಾಜಿನಿಂದ ಬಂದ ಹಣವನ್ನು ತಮ್ಮ ಮಗಳ ಶಿಕ್ಷಣಕ್ಕಾಗಿ ಬಳಸುವುದಾಗಿ ಈ ಹಿಂದೆ ಜೆನ್ನಿಫರ್ ಗ್ವಿನ್ನೆ ಈ ಹಿಂದೆ ಹೇಳಿಕೊಂಡಿದ್ದರು.
ಆಟಕ್ಕೆ ಸೆಕ್ಸ್ ಟಾಯ್ ಬಳಸಿದ ಆರೋಪಕ್ಕೆ ಗುರಿಯಾದ ಗ್ರ್ಯಾಂಡ್ ಮಾಸ್ಟರ್
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ