GIT add 2024-1
Laxmi Tai add
Beereshwara 33

ಪ್ರೇಮ ಸಂಬಂಧದ ಅವಧಿಯ ಉಡುಗೊರೆಗಳ ಹರಾಜು; 165,000 ಡಾಲರ್ ಸಂಗ್ರಹಿಸಿದ ಎಲಾನ್ ಮಸ್ಕ್ ಮಾಜಿ ಗೆಳತಿ

ಕಾಲೇಜು ದಿನಗಳ ಒಂದು ವರ್ಷದ ಪ್ರೀತಿ ತಂದುಕೊಟ್ಟಿತು ಅಪಾರ ಹಣ

Anvekar 3
Cancer Hospital 2

ಪ್ರಗತಿವಾಹಿನಿ ಸುದ್ದಿ, ನ್ಯೂಯಾರ್ಕ್: ಟೆಸ್ಲಾ ಸಿಇಒ ಎಲೋನ್ ಮಸ್ಕ್ ಅವರ ಮಾಜಿ ಗೆಳತಿ ಜೆನ್ನಿಫರ್ ಗ್ವಿನ್ನೆ ಅವರು ತಮ್ಮಿಬ್ಬರ ಒಂದು ವರ್ಷ ಅವಧಿಯ ಪ್ರೇಮ ಸಂಬಂಧದಲ್ಲಿ ಮಸ್ಕ್ ಉಡುಗೊರೆಯಾಗಿ ನೀಡಿದ ಫೋಟೋಗಳು ಮತ್ತು ಸ್ಮರಣಿಕೆಗಳ ಹರಾಜಿನಿಂದ 165,000  ಡಾಲರ್ (1.3 ಕೋಟಿ) ಸಂಗ್ರಹಿಸಿದ್ದಾರೆ.

1994-95 ರ ಅವಧಿಯಲ್ಲಿ ಕಾಲೇಜು ವ್ಯಾಸಂಗದ ವೇಳೆ ಎಲಾನ್ ಮಸ್ಕ್ ಹಾಗೂ ಜೆನ್ನಿಫರ್ ಗ್ವಿನ್ನೆ ಇಬ್ಬರೂ ಪರಸ್ಪರ ಪ್ರೇಮಿಸುತ್ತಿದ್ದ ಸಂದರ್ಭದಲ್ಲಿ ಮಸ್ಕ್ ಅವರು ಗೆಳತಿಗಾಗಿ ಈ ಉಡುಗೊರೆಗಳನ್ನು ನೀಡಿದ್ದರು.

Emergency Service

ಮಸ್ಕ್ ಗ್ವಿನ್ನೆಗೆ ಹುಟ್ಟುಹಬ್ಬದ ಉಡುಗೊರೆಯಾಗಿ ನೀಡಿದ ಹಸಿರು ಪಚ್ಚೆಯೊಂದಿಗಿನ ಚಿನ್ನದ ನೆಕ್ಲೇಸ್ 51,000 ಡಾಲರ್ ಗೆ ಮಾರಾಟವಾಯಿತು. ಆದರೆ ಮಸ್ಕ್ ಅವರ ಈ ಹಿಂದೆ ನೋಡಲು ಅಲಭ್ಯವಾಗಿದ್ದ ಫೋಟೋಗಳು 21,000  ಡಾಲರ್ ವರೆಗೆ ಮಾರಾಟವಾದವು.

ಹರಾಜಿನಿಂದ ಬಂದ ಹಣವನ್ನು ತಮ್ಮ ಮಗಳ ಶಿಕ್ಷಣಕ್ಕಾಗಿ ಬಳಸುವುದಾಗಿ ಈ ಹಿಂದೆ ಜೆನ್ನಿಫರ್ ಗ್ವಿನ್ನೆ ಈ ಹಿಂದೆ ಹೇಳಿಕೊಂಡಿದ್ದರು.

ಆಟಕ್ಕೆ ಸೆಕ್ಸ್ ಟಾಯ್ ಬಳಸಿದ ಆರೋಪಕ್ಕೆ ಗುರಿಯಾದ ಗ್ರ್ಯಾಂಡ್ ಮಾಸ್ಟರ್

 

Bottom Add3
Bottom Ad 2