
ಪ್ರಗತಿವಾಹಿನಿ ಸುದ್ದಿ, ಬಾಗಲಕೋಟ: ಇಲ್ಲಿನ ಹೊರವಲಯದ ನವನಗರದ ತೇಜಸ್ ಅಂತಾರಾಷ್ಟ್ರೀಯ ಶಾಲೆಯಲ್ಲಿ ಎಂಆರ್ ಎನ್ (ನಿರಾಣಿ) ಫೌಂಡೇಶನ್ ಹಾಗೂ ಬೀಳಗಿಯ ಬಿಜೆಪಿ ಯುವ ಘಟಕದ ನೇತೃತ್ವದಲ್ಲಿ ಜು.10ರಂದು ಬೃಹತ್ ಉದ್ಯೋಗ ಮೇಳ, ಉಚಿತ ಆರೋಗ್ಯ ಹಾಗೂ ಶಸ್ತ್ರಚಿಕಿತ್ಸಾ ಶಿಬಿರ ಆಯೋಜಿಸಲಾಗಿದೆ.
ಬೆಳಗ್ಗೆ 10.30ಕ್ಕೆ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ ನಿರಾಣಿ ಅವರು ಉದ್ಘಾಟನೆ ನೆರವೇರಿಸುವರು. ಹಲವು ಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಉದ್ಯೋಗ ಮೇಳ ಬೆಳಿಗ್ಗೆ 9ರಿಂದ ಸಂಜೆ 4ರವರೆಗೆ ನಡೆಯಲಿದೆ. ವಿಜಯಪುರದ ಬಿ.ಎಂ.ಪಾಟೀಲ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಸಂಶೋಧನಾ ಕೇಂದ್ರ, ಬಾಗಲಕೋಟ ನವನಗರದ ಎಂಆರ್ ಎನ್ ಆಯುರ್ವೇದ ವೈದ್ಯಕೀಯ ಆಸ್ಪತ್ರೆ ಬಿಜೆಪಿ ಬೀಳಗಿ ಮಂಡಲ ಯುವಮೋರ್ಚಾ ವತಿಯಿಂದ ನಡೆಯುವ ಆರೋಗ್ಯ ಹಾಗೂ ಶಸ್ತ್ರಚಿಕಿತ್ಸಾ ಶಿಬಿರದಲ್ಲಿ ಎಲುಬು, ಕೀಲು, ಮಕ್ಕಳ ವೈದ್ಯಕೀಯ ವಿಭಾಗ, ಹೃದ್ರೋಗ, ಕಿವಿ, ಮೂಗು, ಗಂಟಲು, ಚರ್ಮರೋಗ, ನೇತ್ರ ತಪಾಸಣೆ, ಚಿಕಿತ್ಸೆ ಕೈಗೊಳ್ಳಲಾಗುವುದು.
ಶಸ್ತ್ರಚಿಕಿತ್ಸೆಗೆ ತೆರಳುವವರಿಗೆ ಊಟ, ಸಾರಿಗೆ ಹಾಗೂ ಔಷಧೋಪಚಾರವನ್ನು ಉಚಿತವಾಗಿ ನೀಡಲಾಗುವುದು. ಹೆಚ್ಚಿನ ಮಾಹಿತಿಗೆ ಮೊ. 9591918747, 9900212134, 9071772722, 9071776454ಗೆ ಸಂಪರ್ಕಿಸಬಹುದು ಎಂದು ಸಂಘಟಕರು ತಿಳಿಸಿದ್ದಾರೆ.
ಕಾರ್ತಿ ಚಿದಂಬರಂ ನಿವಾಸದ ಮೇಲೆ CBI ಅಧಿಕಾರಿಗಳ ದಾಳಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ