ಪ್ರಗತಿವಾಹಿನಿ ಸುದ್ದಿ, ಚಂಡಿಗಡ: ದೈಹಿಕವಾಗಿ ತರಗತಿಗಳಿಗೆ ಹಾಜರಾಗದೆ ಎಂಜಿನಿಯರಿಂಗ್ ಡಿಗ್ರಿ ಪಡೆದವನನ್ನು ಎಂಜಿನಿಯರ್ ಎನ್ನಲಾಗದು ಎಂದು ಪಂಜಾಬ್- ಹರಿಯಾಣಾ ಹೈಕೋರ್ಟ್ ಅಭಿಪ್ರಾಯ ವ್ಯಕ್ತಪಡಿಸಿದೆ.
ಹರಿಯಾಣಾ ಪೊಲೀಸ್ ವಸತಿ ನಿಗಮಕ್ಕೆ ಇತ್ತೀಚೆಗೆ ಇಲಾಖೆಯ ಸಿಬ್ಬಂದಿಯೊಬ್ಬರಿಗೆ ಮುಖ್ಯ ಕಾರ್ಯನಿರ್ವಾಹಕ ಅಭಿಯಂತರರಾಗಿ ಬಡ್ತಿ ನೀಡಲಾಗಿತ್ತು. ಆದರೆ ಆ ಸಿಬ್ಬಂದಿ ತರಗತಿಗಳಿಗೆ ದೈಹಿಕವಾಗಿ ಹಾಜರಾಗದೆ ದೂರ ಶಿಕ್ಷಣ ಪದ್ಧತಿ ಮೂಲಕ ಎಂಜಿನಿಯರಿಂಗ್ ಡಿಗ್ರಿ ಪಡೆದಿದ್ದರು. ಇದು ವ್ಯಾಜ್ಯವಾಗಿ ಕೋರ್ಟ್ ಮೆಟ್ಟಿಲೇರಿತ್ತು.
ಈ ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡ ಹೈಕೋರ್ಟ್ ತರಗತಿಗಳಿಗೆ ಹಾಜರಾಗದೆ, ಪ್ರಾಕ್ಟಿಕಲ್ ಜ್ಞಾನವಿಲ್ಲದೆ ದೂರಶಿಕ್ಷಣದ ಮೂಲಕ ಎಂಜಿನಿಯರಿಂಗ್ ಡಿಗ್ರಿ ಪಡೆದವನಿಗೆ ಎಂಜಿನಿಯರ್ ಎಂದು ಪರಿಗಣಿಸುವುದು ಸಾಧ್ಯವಿಲ್ಲ ಎಂದು ಅಭಿಪ್ರಾಯಿಸಿದೆ.
ಇಬ್ಬರು ಪಾಲಿಕೆ ಎಂಜಿನಿಯರ್ ಗಳು ಸಸ್ಪೆಂಡ್
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ