Latest

ನೊಂದ ವಿದ್ಯಾರ್ಥಿನಿ ಆತ್ಮಹತ್ಯೆ

ಪ್ರಗತಿವಾಹಿನಿ ಸುದ್ದಿ; ಕೋಲಾರ: ಎಂಜಿನಿಯರಿಂಗ್ ಪರೀಕ್ಷೆಯಲ್ಲಿ ಫೇಲ್ ಆಗಿದ್ದಕ್ಕೆ ಮನನೊಂದ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕೋಲಾರ ಜಿಲ್ಲೆ ಗೌರಿಪೇಟೆಯಲ್ಲಿ ನಡೆದಿದೆ.

ಅನುಶ್ರೀ ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿ. ಉಜಿರೆಯ ಪ್ರತಿಷ್ಠಿತ ಕಾಲೇಜಿನಲ್ಲಿ ಕೊನೆ ಸೆಮಿಸ್ಟರ್ ಪರೀಕ್ಷೆ ಬರೆದಿದ್ದ ಅನುಶ್ರೀ, ಫಲಿತಾಂಶ ಬಂದಾಗಿನಿಂದ ಬೇಸರದಲ್ಲಿದ್ದಳು. ಮೂರು ಸಬ್ಜಕ್ಟ್ ನಲ್ಲಿ ಫೇಲ್ ಆಗಿದ್ದಕ್ಕೆ ತುಂಬಾ ದು:ಖದಲ್ಲಿದ್ದಳು.

ಉಪನ್ಯಾಸಕರಾಗಿದ್ದ ತಂದೆ ಗೋಪಿಕೃಷ್ಣ ಹಾಗೂ ಮನೆಯವರು ಎಷ್ಟೇ ಸಮಾಧಾನ ಮಾಡಿ, ಧೈರ್ಯ ತುಂಬಿದರೂ ಮೌನಕ್ಕೆ ಶರಣಾಗಿದ್ದಳು. ಯಾರೊಂದಿಗೂ ಮಾತನಾಡುತ್ತಿರಲಿಲ್ಲ, ಸದಾ ಬೇಸರದಲ್ಲಿಯೇ ಇರುತ್ತಿದ್ದ ಯುವತಿ ಇಂದು ಮುಂಜಾನೆ ಮನೆಯಲ್ಲಿಯೇ ನೇಣಿಗೆ ಶರಣಾಗಿದ್ದಾಳೆ.

ಅಜ್ಜಿ ಮೊಮ್ಮಗಳಿಗೆ ಟೀ ತಂದು ಕೊಟ್ಟು ಅಡುಗೆ ಮನೆಗೆ ಹೋಗಿದ್ದರು, ತಾಯಿ ಸ್ನಾನಕ್ಕೆಂದು ಹೋಗಿದ್ದರು. ತಾಯಿ ಸ್ನಾನ ಮುಗಿಸಿ ಬರುಷ್ಟರಲ್ಲಿ ಮಗಳು ಫ್ಯಾನ್ ಗೆ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ. ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅಷ್ಟರಲ್ಲೇ ಯುವತಿ ಕೊನೆಯುಸಿರೆಳೆದಿದ್ದಳು.
ಪರಿಣತರ ಸಮಿತಿ ರಚನೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

Home add -Advt

Related Articles

Back to top button