ಪ್ರಗತಿವಾಹನಿ ಸುದ್ದಿ, ಬೆಳಗಾವಿ –ಬೆಳಗಾವಿ ನಗರದ ಪ್ರವಾಹ ಸಂತ್ರಸ್ತರಿಗೆ ಭಾನುವಾರು ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿದೆ. ಫರಾಳ ಮತ್ತು ಬಾಲ್ಯದ ಆಟಗಳು ಎನ್ನುವ ವಿಶಿಷ್ಟ ಕಾರ್ಯಕ್ರಮವನ್ನು ಶಾಸಕ ಅಭಯ ಪಾಟೀಲ ಆಯೋಜಿಸಿದ್ದಾರೆ.
ಪ್ರವಾಹದಿಂದ ಸಂತ್ರಸ್ತರಾಗಿರುವ ಬೆಳಗಾವಿ ದಕ್ಷಿಣ ಕ್ಷೇತ್ರದ ಸುಮಾರು 3 ಸಾವಿರ ಜನರು ಈ ಬಾರಿ ದೀಪಾವಳಿ ಆಚರಿಸಲಾಗಲಿಲ್ಲ. ಮನೆಗಳ ಜೊತೆಗೆ ಸಾಮಾನು -ಸರಂಜಾಮುಗಳನ್ನೂ ಕಳೆದುಕೊಂಡಿರುವ ಜನರು ಹಬ್ಬದ ಖುಷಿ ಅನುಭವಿಸಲಿಲ್ಲ.
ಈ ಹಿನ್ನೆಲೆಯಲ್ಲಿ ಅಭಯ ಪಾಟೀಲ ಭಾನುವಾರ ಪ್ರವಾಹ ಸಂತ್ರಸ್ತರೊಂದಿಗೆ ವಿಶೇಷ ರೀತಿಯಲ್ಲಿ ಹಬ್ಬದ ಆಚರಣೆ ಮಾಡಲಿದ್ದಾರೆ. ಅಂದು ಬೆಳಗ್ಗೆ 8 ಗಂಟೆಗೆ ನಗರದ ಲೇಲೆ ಮೈದಾನದಲ್ಲಿ ಕಾರ್ಯಕ್ರಮ ನಡೆಯುವುದು. ಪ್ರವಾಹ ಸಂತ್ರಸ್ತರಿಗೆ ಫರಾಳ ಹಂಚಲಾಗುವುದು. ಹಬ್ಬದ ಸಂದರ್ಭದಲ್ಲಿ ನಡೆಸುವ ಸಾಂಪ್ರದಾಯಿಕ ಆಚರಣೆಗಳು, ಬಾಲ್ಯದ ಆಟಗಳನ್ನು ಆಡಿಸಲಾಗುತ್ತದೆ. ತೆಂಗಿನ ಕಾಯಿಗಳನ್ನು ಒಡೆಯಲಾಗುತ್ತದೆ. ಲಗೋರಿ ಸೇರಿದಂತೆ ಕೆಲವು ಆಟಗಳನ್ನು ಆಡಿಸಲಾಗುತ್ತದೆ.
ಸುಮಾರು ಎರಡರಿಂದ ಎರಡೂವರೆ ಗಂಟೆಗಳ ಕಾಲ ದೀಪಾವಳಿ ಆಚರಣೆ ನಡೆಯಲಿದ್ದು, ಸುಮಾರು 2 ಸಾವಿರ ಜನರು ಸೇರುವ ನಿರೀಕ್ಷೆ ಇದೆ ಎನ್ನುತ್ತಾರೆ ಅಭಯ ಪಾಟೀಲ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ