Kannada NewsKarnataka News

ಪ್ರಾಥಮಿಕ ಮತ್ತು ಹೈಸ್ಕೂಲ್ ವಿದ್ಯಾರ್ಥಿಗಳಿಗೆ ಬೆಳಗಾವಿಯಲ್ಲಿ ಐಎಎಸ್ ಫೌಂಡೇಷನ್ ಪ್ರವೇಶ ಪರೀಕ್ಷೆ

 ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಐಎಎಸ್ ಮತ್ತು ಕೆಎಎಸ್ ನಾಗರೀಕ ಸೇವಾ ಪರೀಕ್ಷೆಗಳಲ್ಲಿ ಸಿದ್ಧತೆ ಮತ್ತು ಜಾಗೃತಿ ದೃಷ್ಟಿಯಿಂದ ದೆಹಲಿಯ ಸಂಕಲ್ಪ ಮತ್ತು ನಗರದ ಸಮುತ್ಕರ್ಷದ ನೇತೃತ್ವದಲ್ಲಿ ಪ್ರಾಥಮಿಕ ಮತ್ತು ಹೈಸ್ಕೂಲ್ ವಿದ್ಯಾರ್ಥಿಗಳಿಗಾಗಿ ಬೆಳಗಾವಿ ನಗರದಲ್ಲಿ ಅ.೩೧ರಂದು ರವಿವಾರ ಐಎಎಸ್ ಫೌಂಡೇಷನ್ ಪ್ರವೇಶ ಪರೀಕ್ಷೆಯನ್ನು ನಗರದ ಹಿಂದವಾಡಿಯ ಐಎಂಇಆರ್ ಕಾಲೇಜಿನಲ್ಲಿ ಆಯೋಜಿಸಲಾಗಿದೆ.
ಪ್ರಾಥಮಿಕ ಮತ್ತು ಹೈಸ್ಕೂಲ್ ವಿದ್ಯಾರ್ಥಿಗಳಲ್ಲಿ ನಾಗರೀಕ ಸೇವಾ ಪರೀಕ್ಷೆಗಳಿಗೆ ಅಗತ್ಯವಿರುವ ಮಾನಸಿಕ, ಬೌದ್ಧಿಕ ಮತ್ತು ಶೈಕ್ಷಣ ಕ ಸಾಮರ್ಥ್ಯದ ವೃದ್ಧಿಗೆ ಸ್ಪೂರ್ತಿ ಮತ್ತು ಕೀರ್ತಿ ಎಂಬ ಕಾರ್ಯಕ್ರಮಗಳ ಮೂಲಕ ಬೆಳಗಾವಿಯ ಸಮುತ್ಕರ್ಷ ಯೋಜನೆ ರೂಪಿಸಿದೆ. ಹೆಚ್ಚಿನ ಮಾಹಿತಿಗೆ ಮೊ: ೭೦೨೨೦೨೮೪೬೮ ಬಸವರಾಜ ರಾಮಪುರೆ ಅವರನ್ನು ಸಂಪರ್ಕಿಸಬಹುದು ಎಂದು ಜಿತೇಂದ್ರ ನಾಯಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಿತ್ತೂರು ಅಭಿವೃದ್ಧಿ  ಪ್ರಾಧಿಕಾರಕ್ಕೆ 50 ಕೋಟಿ ರೂ.ಗಳ ಅನುದಾನ- ಸಿ.ಎಂ ಬಸವರಾಜ ಬೊಮ್ಮಾಯಿ

Home add -Advt

Related Articles

Back to top button