ಪ್ರಗತಿವಾಹಿನಿ ಸುದ್ದಿ; ಕಾರವಾರ: ಅತಿ ಹೆಚ್ಚು ಭವಿಷ್ಯ ನಿಧಿ ಚಂದಾದಾರರ ಇ-ನಾಮನಿರ್ದೇಶನ ಸಲ್ಲಿಕೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ್ದಕ್ಕೆ ನೌಕರರ ಭವಿಷ್ಯ ನಿಧಿ ಕಚೇರಿಯ ಹುಬ್ಬಳ್ಳಿ ವಲಯವು ದೇಶದಲ್ಲಿಯೇ ಪ್ರಥಮ ಸ್ಥಾನ ಪಡೆದಿದೆ.
ದೇಶದ 21 ವಲಯಗಳಲ್ಲಿ ಹುಬ್ಬಳ್ಳಿಗೆ ಅಗ್ರಸ್ಥಾನ ಸಂದಿದೆ. ಗುವಾಹತಿಯಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅಸ್ಸಾಂ ಮುಖ್ಯಮಂತ್ರಿ ಡಾ. ಹೀಮಂತ್ ಬಿಸ್ವಾಸ್ ಹಾಗೂ ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಖಾತೆ ಸಚಿವ ಭೂಪೇಂದ್ರಯಾದವ್ ಅವರಿಂದ ಹುಬ್ಬಳ್ಳಿ ವಲಯ ಹೆಚ್ಚುವರಿ ಭವಿಷ್ಯ ನಿಧಿ ಆಯುಕ್ತ ಮಾರುತಿ ಭೋಯಿ ಅವರು ೧ ಲಕ್ಷರೂ. ನಗದು ಬಹುಮಾನ, ಪ್ರಮಾಣಪತ್ರ, ಸ್ಮರಣಿಕೆಯನ್ನು ಸ್ವೀಕರಿಸಿದರು.
ಹೆಚ್ಚುವರಿ ಭವಿಷ್ಯ ನಿಧಿ ಆಯುಕ್ತ ಮಾರುತಿ ಭೋಯಿ ಅವರ ನೇತೃತ್ವದಲ್ಲಿ ಹುಬ್ಬಳ್ಳಿ ವಲಯದ ಇ-ನಾಮನಿರ್ದೇಶನ ಸಲ್ಲಿಕೆ ಪ್ರಕ್ರಿಯೆಯಲ್ಲಿ ನಿಗದಿತ ಗುರಿಯನ್ನು ತಲುಪಿರುವುದಲ್ಲದೇ ದೇಶಕ್ಕೆ ಪ್ರಥಮ ಸ್ಥಾನ ಪಡೆದಿರುವುದು ಹೆಮ್ಮೆಯ ಸಂಗತಿಯಾಗಿದೆ. ವಲಯ ಹಾಗೂ ಪ್ರಾದೇಶಿಕ ಕಚೇರಿಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಈ ಸಾಧನೆಗೆ ಕಾರಣೀಕರ್ತರು ಎಂದು ಹುಬ್ಬಳ್ಳಿ ಪ್ರಾದೇಶಿಕ ಭವಿಷ್ಯ ನಿಧಿ ಆಯುಕ್ತ ಮಿಹಿರ್ ಕುಮಾರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕೇಂದ್ರ ಸರ್ಕಾರದ ಸ್ವಾಮಿತ್ವ ಯೋಜನೆ: ಗ್ರಾಮಸ್ಥರಿಗೆ ಆಸ್ತಿ ಕಾರ್ಡ್ ನೀಡುವ ಯೋಜನೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ