ಶ್ರೀನಗರದಲ್ಲಿ 5 ಉಗ್ರರ ಬಂಧನ

ಪ್ರಗತಿವಾಹಿನಿ ಸುದ್ದಿ; ನವದೆಹಲಿ: ಶ್ರೀನಗರದಲ್ಲಿ ಜೈಷ್ ಇ ಮೊಹಮ್ಮದ್ ಉಗ್ರ ಸಂಘಟನೆಯ ದಾಳಿ ಘಟಕವನ್ನು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಧ್ವಂಸಗೊಳಿಸಿದ್ದಾರೆ. ಅಲ್ಲದೇ ಗಣರಾಜ್ಯೋತ್ಸವದಂದು ಭಾರೀ ಪ್ರಮಾಣದಲ್ಲಿ ವಿಧ್ವಂಸಕ ಕೃತ್ಯ ಎಸಗಲು ಸಂಚು ರೂಪಿಸಿದ್ದ ಐವರನ್ನು ಬಂಧಿಸಿದ್ದಾರೆ.

ಬಂಧಿತ ಐವರು ಉಗ್ರರಿಂದ ಭಾರೀ ಪ್ರಮಾಣದ ಸ್ಫೋಟಕ ಸಾಮಗ್ರಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸದರ್​ಬಾಲ್ ಹಜರತ್​ಬಲ್​ನ ಏಜಾಜ್​ ಶೈಖ್, ಅಸಾರ್ ಕಾಲೊನಿ ಹಜರತ್​ಬಲ್​ನ ಉಮರ್ ಹಮೀದ್ ಶೈಖ್,ಅಮೀದ್ ಚಿಕ್ಲಾ ಅಲಿಯಾಸ್ ಇಮ್ರಾನ್, ಎಲ್ಲಾಹಿಬಾಗ್​ ಸೌರಾದ ಸಾಹಿಲ್ ಫಾರೂಖ್ ಗೋಜ್ರಿ ಮತ್ತು ಸದರ್​ಬಲ್ ಹಜರತಬಲ್​ನ ನಾಸೀರ್ ಅಹ್ಮದ್​ ಬಂಧಿತ ಶಂಕಿತ ಉಗ್ರರಾಗಿದ್ದಾರೆ.

ಜೈಷ್ ಘಟಕದ ನಾಶ ದೊಡ್ಡ ಯಶಸ್ಸಾಗಿದೆ. ಹಜರತ್​ಬಲ್​ನಲ್ಲಿ ಎರಡು ಗ್ರನೈಡ್ ದಾಳಿ ನಡೆಸಲು ಉಗ್ರರು ಸಂಚು ರೂಪಿಸಿದ್ದರು. ಇದರೊಂದಿಗೆ ಗಣರಾಜ್ಯೋತ್ಸವ ದಿನದಂದು ಉಗ್ರರು ನಡೆಸಲು ಉದ್ದೇಶಿಸಿದ್ದ ಬಹುದೊಡ್ಡ ದಾಳಿಯನ್ನು ಪೊಲೀಸರು ಆರಂಭದಲ್ಲೇ ನಾಶಪಡಿಸಿದ್ದಾರೆ ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಇಲಾಖೆ ಟ್ವೀಟ್ ಮಾಡಿದೆ.

 

Home add -Advt

Related Articles

Back to top button