ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ವಿದ್ಯಾರ್ಥಿಗಳ ಭವಿಷ್ಯವು ಮೌಲ್ಯಮಾಪಕರ ಕೈಯಲ್ಲಿ ಅಡಗಿರುವುದರಿಂದ ಮೌಲ್ಯಮಾಪಕರು ಶಿಸ್ತುಬದ್ದವಾಗಿ ಈ ಪವಿತ್ರ ಕಾರ್ಯವನ್ನು ಪೂರೈಸಬೇಕು ಎಂದು ಪ್ರಾಚಾರ್ಯರು ಮತ್ತು ಮೌಲ್ಯಮಾಪನ ಕೇಂದ್ರದ ಮುಖ್ಯಸ್ಥರಾದ ಡಾ. ನಿರ್ಮಲಾ ಬಟ್ಟಲ ಕರೆ ನೀಡಿದರು.
ರಾಣಿ ಚನ್ನಮ್ಮಾ ವಿಶ್ವವಿದ್ಯಾಲಯದ ಮೌಲ್ಯಮಾಪನ ಕಾರ್ಯವು ಮೌಲ್ಯಮಾಪನ ಕೇಂದ್ರವಾದ ಮಹಾಂತೇಶ ನಗರ ರಹವಾಸಿಗಳ ಸಂಘದ ಶಿಕ್ಷಣ ಮಹಾವಿದ್ಯಾಲಯದಲ್ಲಿ ಇಂದು ಪ್ರಾರಂಭವಾಯಿತು.
ಮೌಲ್ಯಮಾಪನದ ಸಲಹಾ ಸೂಚಿ ಮಾರ್ಗದರ್ಶನವನ್ನು ನೀಡಿದ ಅವರು, ಶಿಕ್ಷಕ ವೃತ್ತಿಯಲ್ಲಿ ಮೌಲ್ಯಮಾಪನವು ಅತ್ಯಂತ ಪವಿತ್ರವಾದ ಕಾರ್ಯ. ಆದ್ದರಿಂದ ಮೌಲ್ಯಮಾಪಕರು ಯಾವುದೇ ಭಾವಾವೇಶಕ್ಕೆ ಒಳಗಾಗದೇ, ನಿರ್ಲಕ್ಷವಹಿಸದೆ ಶಿಸ್ತುಬದ್ದವಾಗಿ, ವಸ್ತುನಿಷ್ಠವಾಗಿ ಜವಾಬ್ದಾರಿಯಿಂದ ಮೌಲ್ಯಮಾಪನವನ್ನು ಕೈಗೊಳ್ಳಬೇಕು. ವಿದ್ಯಾರ್ಥಿಗಳ ಭವಿಷ್ಯ ಮೌಲ್ಯಮಾಪಕರ ಕೈಯಲ್ಲಿ ಅಡಗಿರುತ್ತದೆ ಎಂದು ಹೇಳಿದರು.
ಮೌಲ್ಯಮಾಪನ ಕಾರ್ಯವನ್ನು ಯಶಸ್ವಿಗೊಳಿಸುವುದು ಚೆರಮನ್, ಮಾಡರೇಟರ್ ಮತ್ತು ಎಲ್ಲ ಮೌಲ್ಯಮಾಪಕರ ಜವಾಬ್ದಾರಿಯಾಗಿದೆ ಎಂದು ವಾಣಿಜ್ಯ ಶಾಸ್ತ್ರವಿಭಾಗದ ಮೌಲ್ಯಮಾಪನ ಮುಖ್ಯಸ್ಥ ಪ್ರೋ.ಎಸ್.ಜಿ.ಸೊನ್ನದ ಹೇಳಿದರು. ಮೌಲ್ಯಮಾಪಕರು ಜವಾಬ್ದಾರಿಯುತವಾಗಿ ವಿಶ್ವವಿದ್ಯಾಲಯದ ನಿಯಮಾವಳಿ ಅನುಸಾರ ಕಾರ್ಯವನ್ನು ನಿರ್ವಹಿಸಬೇಕು ಎಂದು ಕರೆನೀಡಿದರು.
ರಾಣಿ ಚನ್ನಮ್ಮಾ ವಿಶ್ವವಿದ್ಯಾಲಯ ಅಧೀನದಲ್ಲಿ ಬರುವ ಬೆಳಗಾವಿ, ಬಾಗಲಕೋಟೆ ಮತ್ತು ವಿಜಯಪುರದ ವಾಣಿಜ್ಯ ಮಹಾವಿದ್ಯಾಲಯದ ಸುಮಾರು ೩೦೦ ಜನ ಮೌಲ್ಯಮಾಪಕರು, ಮೌಲ್ಯಮಾಪನಕ್ಕೆ ಹಾಜರಾದರು. ವಿವಿಧ ವಿಷಯಗಳ ಮುಖ್ಯಸ್ಥರಾದ ಪ್ರೊ.ಡಿ.ಎಸ್.ಗುಡ್ಡೆದೆನ್ನಿ, ಪ್ರೊ.ಸಿ.ಆರ್.ಗುಡಸಿ, ಪ್ರೊ.ಪಿ.ಜಿ.ಕನ್ನೂರ, ಪ್ರೊ.ಪಿ.ಬಿ ಹೊನ್ನಪ್ಪನವರ, ಕೋಆಡಿನೇಟರ್ ಗಳಾದ ಪ್ರೊ. ಬಾಲಾಜಿ, ಪ್ರೊ. ಆದಿನಾಥ ಉಪಾಧ್ಯಾಯ ಉಪಸ್ಥಿತರಿದ್ದರು. ಪ್ರೊ.ಎ.ಜಿ.ಜಂಬಗಿ ನಿರೂಪಿಸಿ ವಂದಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ