Latest

*ನೀವು ಎವರೆಸ್ಟ್ ಚಿಕನ್ ಮಸಾಲಾ ಬಳಸುತ್ತಿದ್ದೀರಾ? ಈ ಸುದ್ದಿ ಓದಿ*

ಮಸಾಲೆ ಪೌಡರ್ ನಲ್ಲಿ ಹಾನಿಕಾರಕ ಅಂಶ ಪತ್ತೆ

ಪ್ರಗತಿವಾಹಿನಿ ಸುದ್ದಿ: ದಿನನಿತ್ಯ ಆಹಾರ ಪದಾರ್ಥಗಳಲ್ಲಿ ಬಳಸುವ ಎವೆರೆಸ್ಟ್ ಮಸಾಲೆ ಬಹುತೇಕರ ಅಚ್ಚುಮೆಚ್ಚು. ಆದರೆ ಈಗ ಎವರೆಸ್ಟ್ ಮಸಾಲೆಯೊಂದರಲ್ಲಿ ಆರೋಗ್ಯಕ್ಕೆ ಅಪಾಯಕಾರಿಯಾಗಿರುವ ಅಂಶ ಅತಿ ಹೆಚ್ಚು ಬಳಸಿರುವುದು ಪತ್ತೆಯಾಗಿದ್ದು, ಆಹಾರ ಸುರಕ್ಷತಾ ಅಧಿಕಾರಿಗಳು ಸಾರ್ವಜನಿಕರಿಗೆ ತಕ್ಷಣ ಎವರೆಸ್ಟ್ ಚಿಕನ್ ಮಸಾಲಾ ಬಳಸುವುದನ್ನು ನಿಲ್ಲಿಸುವಂತೆ ಸೂಚಿಸಿದ್ದಾರೆ.

ಉತ್ತರ ಕನ್ನಡ ಆಹಾರ ಸುರಕ್ಷತಾ ಅಧಿಕಾರಿ ರಾಜಶೇಖರ್, ಎವರೆಸ್ಟ್ ಚಿಕನ್ ಮಸಾಲೆಯಲ್ಲಿ ಎಥಿಲಿನ್ ಆಕ್ಸೈಡ್ ಅತಿ ಹೆಚ್ಚು ಪ್ರಮಾಣದಲ್ಲಿ ಬಳಸಿರುವಿದು ದೃಢವಾಗಿದೆ. ಎಥಲಿನ್ ಆಕ್ಸೈಡ್ ಮೆಣಸಿನಪುಡಿಗೆ ಬಳಸುವ ಕೀಟನಾಶಕ. ಇದನ್ನು ಮಸಾಲೆಯಲ್ಲಿ ಶೇ.0.01ರಷ್ಟು ಮಾತ್ರ ಬಳಸಬಹುದು. ಆದರೆ ಎವರೆಸ್ಟ್ ಚಿಕನ್ ಮಸಾಲೆಯಲ್ಲಿ ಶೇ.3.93ರಷ್ಟು ಪ್ರಮಾಣದಲ್ಲಿರುವುದು ಕಂಡುಬಂದಿದೆ.

ಎಥಿನಿಲ್ ಆಕ್ಸೈಡ್ ಪ್ರಮಾಣ ಇಷ್ಟೊಂದು ಮಟ್ಟದಲ್ಲಿ ಬಳಸಿರುವುದು ಆರೋಗ್ಯಕ್ಕೆ ಹಾನಿಕರ ಹಾಗೂ ಇದರಿಂದ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು. ಹಾಗಾಗಿ ಸಾರ್ವಜನಿಕರು ಎವರೆಸ್ಟ್ ಚಿಕನ್ ಮಸಾಲೆಯನ್ನು ಬಳಸಬಾರದು ಎಂದು ಸೂಚಿಸಿದ್ದಾರೆ. ಈಗಾಗಲೇ ಎವೆರೆಸ್ಟ್ ಮಸಾಲಾ ಕಂಪನಿಗೂ ನೋಟಿಸ್ ನೀಡಲಾಗಿದೆ. ಈಗಾಗಲೇ ಸರಬರಾಜು ಮಾಡಿರುವ ಎವರೆಸ್ಟ್ ಚಿಕನ್ ಮಸಾಲೆ ಪೌಡರನ್ನು ಕರ್ನಾಟಕದಲ್ಲಿ ಮಾತ್ರವಲ್ಲ ದೇಶಾದ್ಯಂತ ಹಿಂಪಡೆಯುವಂತೆಯೂ ತಿಳಿಸಲಾಗಿದೆ. ಜನರು ಯಾರಾದರೂ ಈ ಮಸಾಲೆ ಪೌಡರ್ ಖರೀದಿಸಿದ್ದರೆ ತಕ್ಷಣ ಅಂಗಡಿಗಳಿಗೆ ಹಿಂತಿರುಗಿಸಿ. ಕಂಪನಿಯವರು ಎವರೆಸ್ಟ್ ಚಿಕನ್ ಮಸಾಲೆ ವಾಪಾಸ್ ಪಡೆಯುವ ಕೆಲಸವನ್ನು ಮಾಡುತ್ತಿದ್ದಾರೆ ಎಂದು ತಿಳಿಸಿದರು.

ಇನ್ನು ಎವರೆಸ್ಟ್ ಚಿಕನ್ ಮಸಾಲೆ ಮಾತ್ರವಲ್ಲಿ ಇನ್ನೂ 15 ವಿಧದ ಮಸಾಲೆ ಪೌಡರ್ ಗಳನ್ನು ಪರೀಕ್ಷಿಸಲಾಗುತ್ತಿದೆ. ಈ ಬಗ್ಗೆ ಶೀಘ್ರದಲ್ಲಿಯೇ ವರದಿ ಬರಲಿದೆ ಎಂದು ಹೇಳಿದ್ದಾರೆ.


Related Articles

Back to top button