Latest

ಎಲ್ಲರಿಗೂ ಇಷ್ಟವಾಗುತ್ತಿರುವ ‘ಲಾಕ್ ಡೌನ್’

ಶ್ಯಾಮ್ ಹಂದೆ
ಮಹಾರಾಷ್ಟ್ರ ಸಚಿವ ಸಂಪುಟದಲ್ಲಿಯ ಹೆಚ್ಚಿನ ಸದಸ್ಯರು ಪ್ರಸ್ತುತ ಲಾಕ್ ಡೌನ್ ಇನ್ನೂ ಸ್ವಲ್ಪ ಸಮಯದವರೆಗೆ ವಿಸ್ತರಿಸಬೇಕೆಂದು ಬಯಸುವುದರಲ್ಲಿ ಯಾವುದೇ ಆಶ್ಚರ್ಯವಿಲ್ಲ. ಸಾಧ್ಯವಾದರೆ ಅದು ಶಾಶ್ವತವಾಗಿರಲಿ ಎಂದು ಕೂಡ ಕೆಲವರು ಮನಸ್ಸಿನಲ್ಲಿ ಭಾವಿಸುತ್ತಿರಬಹುದು. ಜನರ ಜೀವನ ಹಕ್ಕನ್ನು ಕಸಿದುಕೊಂಡರೆ, ನಾವು ಇಷ್ಟಪಟ್ಟಂತೆ ಬದುಕಬಹುದು ಎಂದು ಬುದ್ಧಿವಂತ ಆಡಳಿತಗಾರರಿಗೆ ತಿಳಿದಿದೆ. ಹೀಗಾದಲ್ಲಿ ತಮ್ಮ ಯಾವುದೇ ಕೃತಿ ಅಥವಾ ನಿಷ್ಕ್ರಿಯತೆ ಬಗ್ಗೆ ಜನರಿಗೆ  ಲೆಕ್ಖ ನೀಡುವ ಅಗತ್ಯವಿಲ್ಲ. ಕಾರಣ ಜನರು ಅಪವಾದಾತ್ಮಕ ಸಂದರ್ಭಗಳಲ್ಲಿಯ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಮಗ್ನರಾಗಿರುತ್ತಾರೆ.
ಪ್ರಸ್ತುತ ಮಹಾರಾಷ್ಟ್ರದಲ್ಲಿಯ ಲಾಕ್ ಡೌನ್ ಪರಿಸ್ಥಿತಿ ಹಾಗಾಗಿದೆ. ಜನರು ಸಹ ಈ ರೀತಿ ಬದುಕುವ ಅಭ್ಯಾಸಕ್ಕೆ ರೂಢಿಸಿಕೊಂಡಿರುವುದರಿಂದ, ಯಾರೂ ಅದನ್ನು ವಿರೋಧಿಸುವುದಿಲ್ಲ ಎಂದು ತಿಳಿದಿರುವ ಸರ್ಕಾರ ಇಡೀ ಮಹಾರಾಷ್ಟ್ರದಲ್ಲಿ ಲಾಕ್ ಡೌನ್ ಪರಿಸ್ಥಿತಿಯನ್ನು ಮುಂದುವರಿಸುವ ನಿರ್ಣಯ ಸುಲಭವಾಗಿ ತೆಗೆದುಕೊಳ್ಳುತ್ತದೆ. ಹೆಚ್ಚುತ್ತಿರುವ ಕೊರೋನಾ ಇದರ ಹಿಂದಿನ ಸಾರ್ವತ್ರಿಕ ಕಾರಣವಾಗಿದೆ. ಅದರ ಭಯ ತೋರಿಸಿದಲ್ಲಿ, ಈಗಾಗಲೇ ನಡುಗಿರುವ ಸಾಮಾನ್ಯ ಪ್ರಜೆ, ‘ಇಂತಹ ಪರಿಸ್ಥಿತಿ ನಮ್ಮ ಮೇಲೆ ಬಂದಲ್ಲಿ ಏನಾಗಬಹುದು’ ಎಂಬ ಆಲೋಚನೆಯಿಂದ ಸುಮ್ಮನಾಗಿರುತ್ತಾರೆ. ಲಾಕ್ ಡೌನ್ ಗೆ ಕಾರಣವಾದ ಕೊರೋನಾ ಅಲೆ ಇನ್ನೂ ಹೋಗಿಲ್ಲ ಎಂಬುದು ನಿಜ. ಆದರೆ, ಇಡೀ ಮಹಾರಾಷ್ಟ್ರವನ್ನು ಲಾಕ್ ಡೌನ್ ಮಾಡಿ ತಡೆಹಿಡಿಯುವ ರಾಜ್ಯ ಸರ್ಕಾರದ ನಿರ್ಧಾರ ಮರುಪರಿಶೀಲಿಸಬೇಕಾಗಿದೆ. ಮೊದಲ ಅಂಶವೆಂದರೆ ಮುಂಬೈ ಪ್ರದೇಶ ಮತ್ತು ರಾಜ್ಯದ ಇತರ ಭಾಗಗಳ ನಡುವಿನ ವ್ಯತ್ಯಾಸ. ಪ್ರಸ್ತುತ, ಮುಂಬಯಿಯಲ್ಲಿ ಕೊರೋನಾ ಸೊಂಕು ಪ್ರಸಾರದ ವೇಗ ಶೇಕಡಾ ಆರಕ್ಕೆ ಇಳಿದಿದೆ. ಅಂದರೆ, ಪರೀಕ್ಷಿಸಲ್ಪಟ್ಟ ಪ್ರತಿ 100 ಜನರಲ್ಲಿ ಆರು ಮಂದಿ ಪಾಸಿಟಿವ್ ಆಗಿರುತ್ತಾರೆ. ಕರ್ನಾಟಕದಂತಹ ರಾಜ್ಯಗಳಲ್ಲಿ ಈ ಪ್ರಮಾಣವು ಶೇಕಡಾ 33 ರಷ್ಟಿದ್ದರೆ, ಗೋವಾದಲ್ಲಿ ಇದು ಶೇಕಡಾ 50 ರಷ್ಟಿದೆ. ಇದಕ್ಕೆ ಹೋಲಿಸಿದರೆ, ಮುಂಬೈ ಪರಿಸರದಲ್ಲಿ ಈ ಪ್ರಮಾಣವು ಅತ್ಯಲ್ಪದ ಕಡೆಗೆ ಜಾರಿದೆ.
ಎರಡನೆಯ ವಿಷಯವೆಂದರೆ ಕೊರೋನಾ ರೋಗಿ ದುಪ್ಪಟ್ಟು ಆಗುವ ಕಾಲಾವಧಿ. ಪ್ರಸ್ತುತ, ಮುಂಬೈನಲ್ಲಿ ಈ ವೇಗ ಸುಮಾರು 120 ದಿನಗಳಷ್ಟಿದೆ. ಇದರರ್ಥ ಈಗಿರುವ ಕೊರೋನಾ ರೋಗಿಗಳ ಸಂಖ್ಯೆ ದುಪ್ಪಟ್ಟಾಗಲು ಮುಂಬೈಗೆ ಕನಿಷ್ಠ ನಾಲ್ಕು ತಿಂಗಳು ಬೇಕಾಗುತ್ತದೆ. ಮಧ್ಯಂತರ ಅವಧಿಯಲ್ಲಿ ಈ ಕಾಲಾವಧಿ ಆರರಿಂದ ಎಂಟು ತಿಂಗಳಿಗೆ ತಲುಪಿತು. ಈಗಲೂ ಮುಂಬೈ ಪರಿಸರದ ವೇಗ ಅದೇ ದಿಕ್ಕಿನಲ್ಲಿ ಸಾಗುತ್ತಿದೆ. ಉತ್ತರ ಮಹಾರಾಷ್ಟ್ರದಲ್ಲಿ ಪರಿಸ್ಥಿತಿ ಬೇರೆಯೇ ಇದೆ. ಅಲ್ಲದೇ ಗ್ರಾಮೀಣ ಪ್ರದೇಶಗಳಲ್ಲಿ ಕೊರೋನ ಹರಡುವಿಕೆ ವಿರುದ್ಧ ವೇಗದಲ್ಲಿ ಪ್ರಾರಂಭವಾಗಿದೆ. ಪ್ರಶ್ನೆಯೇನೆಂದರೆ, ಇಂತಹ ಸ್ಥಿತಿಯಲ್ಲಿ ಗಮನಾರ್ಹವಾಗಿ ಪರಿಸ್ಥಿತಿ ಸುಧಾರಿಸಿರುವ ಪ್ರಾಂತ್ಯಗಳಲ್ಲಿನ ನಿರ್ಬಂಧಗಳು ಸಡಿಲಿಸಲು ಪ್ರಾರಂಭಿಸಬೇಕು. ಅನಾರೋಗ್ಯದಿಂದ ಬಳಲುವ ರೋಗಿಗೆ ಪಥ್ಯ, ಜಾಷಧೋಪಚಾರ ಮುಂದುವರಿಸಬೇಕೆಂಬುದರಲ್ಲಿ ಬೇರೆ ಮಾತಿಲ್ಲ. ಆದರೆ ಗುಣಮುಖವಾಗುತ್ತಿರುವವನಿಗೂ “ನಿನ್ನ ಆರೋಗ್ಯದ ಬಗ್ಗೆ ಕಾಳಜಿ ಉಂಟಾಗಿದೆ” ಎಂದು ಹೇಳಿ ಕಹಿ ಜಾಷಧಿಯನ್ನು ತೆಗೆದುಕೊಳ್ಳುವಂತೆ ಒತ್ತಾಯಿಸುವಲ್ಲಿ ಯಾವ ಬುದ್ಧಿವಂತಿಕೆ?
ಇದು ಆಡಳಿತದ ಸೋಮಾರಿತನವನ್ನು ತೋರಿಸುತ್ತದೆ.
ಉದಾಹರಣೆ ನೀಡುವುದಾದರೆ ರೋಟಿ, ಕಪ್ ಡಾ, ಮಕಾನ್ ನೀಡುವ ಹೋಟೆಲ್ ಉದ್ಯಮಿಗಳು. ತೆರಿಗೆ ಪಾವತಿಸಬೇಕು, ಅಗ್ನಿ ಸುರಕ್ಷೆ ನಿಯಮಗಳನ್ನು ಕಟ್ಟು ನಿಟ್ಟಾಗಿ ಅನುಸರಿಸುವುದರ ಸಹಿತ, ಸರಕಾರದ ಎಲ್ಲಾ ನಿಯಮಗಳನ್ನು ಪಾಲಿಸುವ ಜವಾಬ್ದಾರಿ ಕೇವಲ ಪ್ರಾಮಾಣಿಕವಾಗಿ ವ್ಯಾಪಾರ ಮಾಡುವ ಹೋಟೆಲಿಗರಿಗಷ್ಟೇ. ಅದೇ ಬೀದಿಯಲ್ಲಿ ವ್ಯಾಪಾರ ಮಾಡುವವರಿಗೆ ಯಾವುದೇ ನಿಯಮಗಳಿಲ್ಲ, ತೆರಿಗೆ ಇಲ್ಲ. ಕೊರೋನಾ ನಿಯಂತ್ರಿಸುವ ನೆಪದಡಿ ಇದೇ ರೀತಿಯ ತಾರತಮ್ಯ ಸರಕಾರ ಅನುಸರಿಸಿದಂತಿದೆ. ಲಾಕ್ ಡೌನ್ ವಿಸ್ತರಿಸುವ ರಾಜ್ಯ ಸರ್ಕಾರದ ಪ್ರಸ್ತುತ ನಿರ್ಧಾರವು ಒಂದು ಕಾಲದ ಸೋವಿಯತ್ ರಷ್ಯಾದಲ್ಲಿ ಸಾಮುದಾಯಿಕ ಕೃಷಿಯ ಹಾಸ್ಯಾಸ್ಪದ ಪ್ರಯೋಗದಂತಿದೆ. ಪ್ರತಿಯೊಬ್ಬರೂ ಹೊಲಗಳಲ್ಲಿ ಕೆಲಸ ಮಾಡಿ ಕೈಗೆ ಬರುವ ಬೆಳೆಗಳನ್ನು ಸರಿ ಸಮಾನವಾಗಿ ಹಂಚಿಕೊಳ್ಳಬೇಕು. ನೋಡಿದರೆ ಈ ಕಲ್ಪನೆ ಸಾತ್ವಿಕ ಮತ್ತು ಅನುಕರಣೀಯವೆಂದು ತೋರುತ್ತಿದ್ದರೂ ಮೂರ್ಖತನದ್ದಾಗಿದ್ದರಿಂದ ಅದು ವಿಫಲವಾಯಿತು. ಆ ವೈಫಲ್ಯದ ಹಿಂದಿನ ಕಾರಣವೇನೆಂದರೆ, ಇಂತಹ ಸಾಮುದಾಯಿಕ ಕೃಷಿಯಲ್ಲಿ ದುಡಿಯುವ ಪ್ರತಿಯೊಬ್ಬರ ಶ್ರಮ ಒಂದೇ ಇರುವುದಿಲ್ಲ. ಕೆಲವರು ಹೆಚ್ಚು ಕೆಲಸ ಮಾಡಿದರೆ ಕೆಲವರು ಕೆಲಸ ಕಳ್ಳರಾಗಿರುತ್ತಾರೆ. ಆದರೂ ಎಲ್ಲರಿಗೂ ಸಮ ಪಾಲು. ಪರಿಣಾಮ, ಹೆಚ್ಚು ಶ್ರಮಿಸುವವರು ಮಂದವಾಗಿ ಉತ್ಪಾದಕತೆ ಕುಸಿಯುತ್ತದೆ. ಇದರರ್ಥ ಮಾನವ ವ್ಯವಹಾರದಲ್ಲಿ ಪ್ರತಿಫಲ ಮತ್ತು ಶಿಕ್ಷೆ ಒಂದು ಪ್ರಮುಖ ತತ್ವವಾಗಿದೆ. ಆದ್ದರಿಂದ ಮುಂಬೈ ಕೊರೋನ ಸೋಂಕಿನ ಮೇಲೆ ಹಿಡಿತ ಸಾಧಿಸಿದರೂ ಸಹ, ಇತರ ಪ್ರಾಂತ್ಯಗಳ ಜೊತೆಗೆ ಮುಂಬಯಿಯನ್ನು ಶಿಕ್ಷಿಸುವುದು ದೊಡ್ಡ ಆಡಳಿತಾತ್ಮಕ ತಪ್ಪು. ರಾಜ್ಯ ಸರ್ಕಾರ ಅದೇ ತಪ್ಪನ್ನು  ಮಾಡುತ್ತಿರುವುದು ಕಂಡು ಬರುತ್ತಿದೆ.
ಈ ವಿಷಯದಲ್ಲಿ ಎರಡನೇ ಅಂಶವೆಂದರೆ ರಾಜ್ಯದ ಹಣಕಾಸು ವ್ಯವಹಾರಗಳಲ್ಲಿ ಮುಂಬೈಯ ಒಟ್ಟು ಪಾಲು. ಈ ನಗರ ರಾಜ್ಯಕ್ಕೆ ಮಾತ್ರವಲ್ಲದೆ ದೇಶಕ್ಕೂ ಪ್ರಗತಿಯ ಎಂಜಿನ್ ಆಗಿದೆ. ಯಾವುದೇ ವಾಹನ ಎಂಜಿನ್‌ ಹೊರತು ನಡೆಯುವುದಿಲ್ಲ ಎಂದು ಹೇಳಬೇಕಾಗಿಲ್ಲ. ಆದ್ದರಿಂದ ಇತರ ಪ್ರಾಂತ್ಯಗಳು ರೂಪುಗೊಳ್ಳುವ ಮೊದಲು ಮುಂಬೈ ಎಂಬ ಎಂಜಿನ್ ಪ್ರಾರಂಭಿಸುವುದು ವ್ಯವಹಾರಿಕ ಮತ್ತು ಆರ್ಥಿಕ ದೃಷ್ಟಿಯಿಂದ ಬುದ್ಧಿವಂತ ನಿಲುವಿನದ್ದಾಗಿದೆ. ಇದನ್ನು ಸಾಧಿಸುವ ಆಡಳಿತಾತ್ಮಕ ಚುರುಕುತನವನ್ನು ರಾಜ್ಯ ಸರ್ಕಾರ ತೋರಿಸಬೇಕು. ಮುಂಬೈನಲ್ಲಿಯ ವ್ಯಾಪಾರೋದ್ಯಮ ಪ್ರವರ್ಧಮಾನಕ್ಕೆ ಬಂದು ನಾಲ್ಕು ಪೈಸೆ ರಾಜ್ಯ ಸರ್ಕಾರದ ಬೊಕ್ಕಸ ಸೇರಿದ್ದಲ್ಲಿ ಇತರ ಇಲಾಖೆಗಳಿಗೆ ಅದರ ಲಾಭ ಪಡೆಯಬಹುದಾಗಿದೆ. ಇದರರ್ಥ ಮುಂಬೈ ಕರೋನಾ ನಿಯಂತ್ರಣದಲ್ಲಿ ಉತ್ತಮ ಪ್ರಗತಿ ಸಾಧಿಸಿದ್ದಲ್ಲಿ, ಈ ಮಹಾನಗರದಲ್ಲಿಯ ವ್ಯಾಪಾರ-ಉದ್ಯಮಗಳಿಗೆ ಬಿಗಿ ಹಿಡಿದ ಪಾಶ ಸಡಿಲುಗೊಳ್ಳಬೇಕು. ಮೇ 14 ರಂದು ಲಾಕಡೌನ್ ಗೆ ಒಂದು ತಿಂಗಳಾಯಿತು. ಈ ಒಂದು ತಿಂಗಳ ಜಮಾಖರ್ಚನ್ನು ಮಂಡಿಸದೆ ಹಿಂದಿನ ಪುಟದಿಂದ ಅದು ಮುಂದುವರಿದರೆ, ಅನುಮಾನ ಕಂಡುಬರುತ್ತದೆ. ಅದು ಸರ್ಕಾರದ ಪಾಲಿಗೆ ಗೌರವವಲ್ಲ.
ಲಾಕ್ ಡೌನ್ ಸರ್ಕಾರ ನಡೆಸುವವರಿಗೆ ಇಷ್ಟವಾಂದತಿದೆ ಎಂಬುದನ್ನು ಇದು ಸೂಚಿಸುತ್ತದೆ. ಜನರನ್ನು ಉದ್ದೇಶಿಸಿ ಮಾತನಾಡುವಾಗ, ಭಾರವಾದ ಅಂತಕರಣದಿಂದ ಲಾಕಡೌನ್ ಹೇರಲಾಗುತ್ತಿದೆ ಎಂದು ಹೇಳುವುದು ವಾಸ್ತವದಲ್ಲಿ ಲಾಕ್ ಡೌನ್ ಮುಂದುವರಿಸುವದರಲ್ಲೇ ಧನ್ಯತೆ ಪಡೆಯುವುದು ಕಂಡು ಬರುತ್ತದೆ. ಆರೋಗ್ಯದ ಹೆಸರಿನಲ್ಲಿ ಲಾಕ್ ಡೌನ್ ಹೇರಿದ ನಂತರ ಎಲ್ಲರೂ ಮೌನ. ಅಂದರೆ, ಸರ್ಕಾರ ಕೇಂದ್ರದತ್ತ ಬೆರಳು ತೋರಿಸಿ ಮತ್ತೊಮ್ಮೆ ನಿಷ್ಕ್ರಿಯತೆಯ ಮಡಿಲಲಿ ಕಿರುನಿದ್ದೆಗೆ ಜಾರಲು ಮುಕ್ತ. ಪ್ರಸ್ತುತ ನಿರ್ಣಯದಿಂದ ಮಹಾರಾಷ್ಟ್ರ ಸರ್ಕಾರದ ಬಗ್ಗೆ ಈ ಗ್ರಹಿಕೆ  ದೃಡವಾಗುವ ಸಾಧ್ಯತೆ ಇದೆ. ಅದನ್ನು ತಪ್ಪಿಸುವುದಿದ್ದರೆ  ಮತ್ತು ವ್ಯವಹಾರಿಕ  ಬುದ್ಧಿವಂತಿಕೆ ಬಾಕಿ ಇದ್ದರೆ , ಸರ್ಕಾರ ಮುಂಬೈ ಪರಿಸರದಲ್ಲಿಯ ಲಾಕ್ ಡೌನ್ ಸ್ವಲ್ಪ ಮಟ್ಟಿಗೆ ಸಡಿಲಗೊಳಿಸಬೇಕು. ಇಲ್ಲದಿದ್ದರೂ ಶ್ರೀಸಾಮಾನ್ಯರು ಎಲ್ಲಾ  ಸಹಿಸಿಕೊಳ್ಳಲು ಸಿದ್ಧರಿದ್ದಾರೆ.

ರೆಮ್ ಡಿಸಿವಿರ್ ಇಂಜಕ್ಷನ್ ಹೆಸರಲ್ಲಿ ವಂಚನೆ; ಸಾರ್ವಜನಿಕರಿಗೆ ಇರಲಿ ಎಚ್ಚರ..!

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button