*ಮಹಿಳೆ ಮೇಲೆ ಗ್ಯಾಂಗ್ ರೇಪ್: ವಿಡಿಯೋ ಬಿಡಿಗಡೆ ಮಾಡುವುದಾಗಿ ಬ್ಲ್ಯಾಕ್ ಮೇಲ್; ಮಾಜಿ ಶಾಸಕ, ಐಎ ಎಸ್ ಅಧಿಕಾರಿಗಳ ವಿರುದ್ಧ ಕೇಸ್ ದಾಖಲು*
ಪ್ರಗತಿವಾಹಿನಿ ಸುದ್ದಿ; ಪಾಟ್ನಾ: ಮಹಿಳೆಯೊಬ್ಬರ ಅತ್ಯಾಚಾರ ನಡೆಸಿ ವಿಡಿಯೋ ಬಿಡುಗಡೆ ಮಾಡುವುದಾಗಿ ಬೆದರಿಕೆ ಹಾಕಿದ್ದ ಐಎ ಎಸ್ ಅಧಿಕಾರಿ ಹಾಗೂ ಮಾಜಿ ಶಾಸಕರ ವಿರುದ್ಧ ಬಿಹಾರ ಪೊಲಿಸರು ಪ್ರಕರಣ ದಾಖಲಿಸಿದ್ದಾರೆ.
ಐಎ ಎಸ್ ಅಧಿಕಾರಿ ಸಂಜೀವ್ ಹನ್ಸ್ ಹಾಗೂ ಆರ್ ಜೆಡಿ ಮಾಜಿ ಶಾಸಕ ಗುಲಾಬ್ ಯಾದವ್ ವಿರುದ್ಧ ದಾನಾಪುರದ ಕೋರ್ಟ್ ಆದೇಶದ ಮೇರೆಗೆ ಪಾಟ್ನಾದ ರೂಪಸ್ ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಹಿಳೆಯೊಬ್ಬರು 2021ರಲ್ಲಿ ದೆಹಲಿಯ ಹೋಟೆಲ್ ನಲ್ಲಿ ಐಎ ಎಸ್ ಅಧಿಕಾರಿ ಹಾಗೂ ಮಾಜಿ ಶಾಸಕರಿಬ್ಬರು ಗನ್ ಪಾಯಿಂಟ್ ಇಟ್ಟು ಬೆದರಿಕೆಯೊಡ್ದಿ, ಗ್ಯಾಂಗ್ ರೇಪ್ ಮಾಡಿದ್ದಾಗಿ ಮಹಿಳೆ ದೂರಿದ್ದರು. ಮಹಿಳೆ ಸಿವಿಲ್ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು. ಅದರೆ ಕೋರ್ಟ್ ಈ ಅರ್ಜಿಯನ್ನು ತಿರಸ್ಕರಿಸಿತ್ತು. ಬಳಿಕ ಸಂತ್ರಸ್ತೆ ಪಾಟ್ನಾ ಹೈಕೋರ್ಟ್ ಮೆಟ್ಟಿಲೇರಿದ್ದರು. ಪ್ರಾಥಮಿಕ ತನಿಖೆ ವರದಿ ಸಲ್ಲಿಸದ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಕೋರ್ಟ್ ಎಚ್ಚರಿಸಿದೆ. ಅಲ್ಲದೇ ಸಿವಿಲ್ ನ್ಯಾಯಾಲಯ ಪ್ರಕರಣದ ವಿಚಾರಣೆಯನ್ನು ಹೊಸದಾಗಿ ನಡೆಸುವಂತೆ ಸೂಚಿಸಿದೆ.
ಮಹಿಳಾ ಆಯೋಗದ ಸದಸ್ಯೆಯನ್ನಾಗಿ ಮಾಡುವುದಾಗಿ ಭರವಸೆ ನೀಡಿದ್ದ ಅಂದಿನ ಶಾಸಕ ಗುಲಾಬ್ ಯಾದವ್, ಮಹಿಳೆಯನ್ನು ತನ್ನ ಮನೆಗೆ ಕರೆಸಿಕೊಂಡು ಅತ್ಯಾಚಾರವೆಸಗಿದ್ದ. ಕೃತ್ಯವನ್ನು ವಿಡಿಯೋ ಮಾಡಿಕೊಂಡು ಬ್ಲ್ಯಾಕ್ ಮೇಲ್ ಮಾಡುತ್ತಿದ್ದ. ಅಲ್ಲದೇ ಮಹಿಳೆಯನ್ನು ದೆಹಲಿಗೆ ಕರೆಸಿಕೊಂಡು ಶಾಸಕ ಹಾಗೂ ಐಎ ಎಸ್ ಅಧಿಕಾರಿ ಇಬ್ಬರೂ ಗ್ಯಾಂಗ್ ರೇಪ್ ನಡೆಸಿದ್ದಾಗಿ ಮಹಿಳೆ ಆರೋಪಿಸಿದ್ದಾರೆ.
*ಡ್ರಗ್ಸ್ ಪ್ರಕರಣ; ಇಬ್ಬರು ವೈದ್ಯರು, ವೈದ್ಯ ವಿದ್ಯಾರ್ಥಿನಿಯರು ಸೇರಿ 10 ಜನರು ಅರೆಸ್ಟ್*
https://pragati.taskdun.com/drugs-casedoctorsmedical-studentsarrestedmangalore/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ