Latest

ವೈನ್ ಶಾಪ್‌ಗೆ ಕಲ್ಲೆಸೆದು ಪುಡಿಗಟ್ಟಿದ ಮಾಜಿ ಕೇಂದ್ರ ಸಚಿವೆ

ಪ್ರಗತಿವಾಹಿನಿ ಸುದ್ದಿ; ಭೋಪಾಲ್; ಮಾಜಿ ಕೇಂದ್ರ ಸಚಿವೆ ಉಮಾ ಭಾರತಿ ಮಧ್ಯಪ್ರದೇಶದ ಭೋಪಾಲ್‌ನಲ್ಲಿ ಮದ್ಯದಂಗಡಿಯೊಂದಕ್ಕೆ ಕಲ್ಲು ಹೊಡೆದು ಪುಡಿಗಟ್ಟಿದ ವಿಡಿಯೋ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿದೆ.

ಉಮಾ ಭಾರತಿ ಮಧ್ಯ ಪ್ರದೇಶದಲ್ಲಿ ಮದ್ಯ ನಿಷೇಧಕ್ಕೆ ಒತ್ತಾಯಿಸಿ ಹೋರಾಟ ನಡೆಸಿದ್ದಾರೆ. ಭೋಪಾಲ್‌ನಲ್ಲಿ ಕಾರ್ಮಿಕರ ವಸತಿ ಹೆಚ್ಚಿರುವ ಪ್ರದೇಶವೊಂದರಲ್ಲಿ ಮದ್ಯದಂಗಡಿಯನ್ನು ಬಂದ್ ಮಾಡುವಂತೆ ಅವರು ಹಲವು ದಿನಗಳಿಂದ ಒತ್ತಾಯಿಸುತ್ತ ಬಂದಿದ್ದರು. ಆದರೆ ಮದ್ಯದಂಗಡಿ ಬಂದ್ ಆಗದ ಕಾರಣ ಭಾನುವಾರ ತಮ್ಮ ಬೆಂಬಲಿಗರೊಂದಿಗೆ ತೆರಳಿದ ಅವರು ಮದ್ಯದಂಗಡಿಗೆ ಸ್ವತಃ ಕಲ್ಲು ಹೊಡೆದು ಮದ್ಯದ ಬಾಟಲಿಗಳು, ಅಂಗಡಿಯ ಗಾಜುಗಳನ್ನು ಪುಡಿ ಮಾಡಿದ್ದಾರೆ.

ಬಳಿಕ ಈ ಘಟನೆಯ ವಿಡಿಯೋ ತುಣುಕನ್ನು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದು ವಿಡಿಯೋ ವೈರಲ್ ಆಗಿದೆ.

ಭೀಕರ ಅಪಘಾತಕ್ಕೆ ಸಂಕೇಶ್ವರದ ವೈದ್ಯೆ, ಮಗಳು ಸಾವು; ಪತಿ ಸ್ಥಿತಿ ಗಂಭೀರ

Home add -Advt

 

ತಾಯಿಯ ಮೃತದೇಹದೊಂದಿಗೆ 4 ದಿನ ಕಳೆದ ಬಾಲಕ ; ತಾಯಿ ನಿದ್ರಿಸುತ್ತಿದ್ದಾಳೆಂದು ತಿಳಿದು ಶಾಲೆಗೆ ಹೋಗಿ ಬರುತ್ತಿದ್ದ !

 

ಅನುಭಾವಿಗಳ ಒಡನಾಟ ಭಗವಂತನ ಒಡನಾಟಕ್ಕೆ ಸಮಾನ: ವಿರುಪಾಕ್ಷ ಗುರೂಜಿ

Related Articles

Back to top button