
ಪ್ರಗತಿವಾಹಿನಿ ಸುದ್ದಿ, ಅಥಣಿ: ಮದುವೆಯಾಗಿ ಕೆಲವೇ ದಿನಗಳಲ್ಲಿ ತನ್ನನ್ನು ಬಿಟ್ಟು ಹೋಗಿದ್ದ ಮಹಿಳೆ ಪ್ರಿಯಕರನೊಂದಿಗಿದ್ದ ಸಂದರ್ಭದಲ್ಲಿ ವ್ಯಕ್ತಿಯೋರ್ವ ಇಬ್ಬರನ್ನೂ ಮರ್ಡರ್ ಮಾಡಿದ್ದಾನೆ.
ಅಥಣಿ ತಾಲೂಕಿನ ಕೊಕಟನೂರ ಯಲ್ಲಮ್ಮವಾಡಿ ಸಾವಳಗಿ ರಸ್ತೆ ಬಳಿ ಘಟನೆ ನಡೆದಿದೆ. ಯಾಸೀನ ಆದಮ್ ಬಾಗೋಡಿ (21) ಹಾಗೂ ಹೀನಾಕಾಸರ ಸುಧಾರಾಣಿ (19) ಕೊಲೆಯಾದವರು. ತೌಫಿಕ್ (28) ಎಂಬಾತ ಕೊಲೆ ಮಾಡಿದ ಈಆರೋಪಿ. ಕೊಲೆಯಾದ ಇಬ್ಬರೂ ಕೊಕಟನೂರು ಯಲ್ಲಮ್ಮವಾಡಿ ನಿವಾಸಿಗಳು.
ಕೆಲವು ತಿಂಗಳ ಹಿಂದೆಯಷ್ಟೇ ತೌಫಿಕ್ ಎಂಬಾತ ಹೀನಾಳನ್ನು ವಿವಾಹವಾಗಿದ್ದ. ಆದರೆ ಯಾಸೀನ್ ಎಂಬಾತನೊಂದಿಗೆ ಆಕೆಯ ಅಕ್ರಮ ಸಂಬಂಧ ತಿಳಿಯುತ್ತಿದ್ದಂತೆ ಡೈವೋರ್ಸ್ ಮಾಡಿದ್ದ.
ಬಳಿಕ ಹೀನಾ ಮತ್ತು ಯಾಸೀನ್ ಒಟ್ಟಿಗೇ ಸಂಸಾರ ಮಾಡುತ್ತಿದ್ದರು. ತೌಫಿಕ್ ಮನೆ ಸಮೀಪವೇ ಅವರೂ ವಾಸಿಸುತ್ತಿದ್ದರು. ಮಂಗಳವಾರ ಸಂಜೆ ತೌಫಿಕ್ ಇಬ್ಬರನ್ನೂ ಕೊಂದು ಹಾಕಿದ್ದಾನೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ