ಪ್ರಗತಿವಾಹಿನಿ ಸುದ್ದಿ; ಚಿಕ್ಕೋಡಿ: ಯಕ್ಸಂಬಾ ಪಟ್ಟಣದ ಗ್ರಾಮ ದೇವರು ಹಾಗೂ ಆರಾಧ್ಯ ದೇವರಾದ ಸುಪ್ರಸಿದ್ಧ ಶ್ರೀ ಬೀರೇಶ್ವರ ಮಂದಿರಕ್ಕೆ ಮುಜರಾಯಿ, ಹಜ್ ಮತ್ತು ವಕ್ಫ್ ಇಲಾಖೆಯ ಸಚಿವರಾದ ಶಶಿಕಲಾ ಜೊಲ್ಲೆ ಯವರು ಭೇಟಿ ನೀಡಿ, ದೇವರ ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿಸಿದರು.
ದೇವಸ್ಥಾನಕ್ಕೆ ಭೇಟಿ ಬಳಿಕ ಮಾತನಾಡಿದ ಸಚಿವೆ ಶಶಿಕಲಾ ಜೊಲ್ಲೆ, ಸುಮಾರು 100 ವರ್ಷಗಳ ಹಿಂದೆ ನಿರ್ಮಾಣವಾದ ಈ ಮಂದಿರಕ್ಕೆ ರಾಜ್ಯ ಸೇರಿದಂತೆ ಹೊರರಾಜ್ಯಗಳಿಂದಲೂ ಭಕ್ತರು ಆಗಮಿಸುತ್ತಾರೆ. ಬಿರೇಶ್ವರ ದೇವರಲ್ಲಿ ನಾಡಿನ ಜನತೆಗೆ ಒಳಿತಾಗಲಿ ಎಂದು ಪ್ರಾರ್ಥಿಸಿದ್ದಾಗಿ ತಿಳಿಸಿದರು.
ಭಕ್ತಿಯಿಂದ ಪೂಜಿಸಿದರೆ, ಭಕ್ತರ ಬೇಡಿಕೆಯನ್ನು ವರ್ಷದೊಳಗೆ ಇಲ್ಲಿನ ದೇವರು ಈಡೇರಿಸುತ್ತಾರೆ ಎಂಬ ನಂಬಿಕೆಯಿದೆ ಎಂದು ಹೇಳಿದರು.
ಯಾವುದರ ದರ ಏರಿಕೆ? ಯಾವುದು ಇಳಿಕೆ?
ಉನ್ನತ ಹುದ್ದೆಗೆ ಮುಳುವಾದ ಬರ್ತಡೆ ಪಾರ್ಟಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ