Kannada NewsKarnataka NewsLatest

*ಅಕ್ರಮ ಚಟುವಟಕೆ ತಡೆಗಟ್ಟಲು ಅಬಕಾರಿ ತಂಡ ರಚನೆ*

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಕರ್ನಾಟಕ ವಿಧಾನಸಭೆ ಸಾರ್ವತ್ರಿಕ ಚುನಾವಣೆ ಘೋಷಣೆ ಹಿನ್ನೆಲೆಯಲ್ಲಿ ಬೆಳಗಾವಿ ದಕ್ಷಿಣ ಜಿಲ್ಲೆಯಾದ್ಯಂತ ಕಳ್ಳಭಟ್ಟಿ ಸಾರಾಯಿ ತಯಾರಿಕೆ ಹಾಗೂ ಮಾರಾಟ, ಗೋವಾ ಮದ್ಯ ಸಾಗಾಣೆ ಹಾಗೂ ಮಾರಾಟ ಹೆಚ್ಚಾಗುವ ಸಂಭವ ಇರುವುದರಿಂದ ಅಕ್ರಮ ಚಟುವಟಕೆಗಳು ನಡೆಯದಂತೆ ಅಬಕಾರಿ ತಂಡಗಳನ್ನು ರಚಿಸಲಾಗಿದೆ.

ಅಕ್ರಮ ಚಟುವಟಿಕೆಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ನಿರಂತರವಾಗಿ ಅಬಕಾರಿ ದಾಳಿ, ಹಗಲು ರಾತ್ರಿ ಗತ್ತು, ರಸ್ತೆಗಾವಲು ನಡೆಸಿ, ವಾಹನಗಳನ್ನು ತಪಾಸಣೆ ನಡೆಸಲಾಗುತ್ತಿದೆ. ಅಂತರಾಜ್ಯ ಗಡಿ ಭಾಗದಲ್ಲಿ ನಿರ್ಮಿಸಿರುವ ೦೫ ತನಿಖಾ ಠಾಣೆಗಳಿಗೆ ಅಬಕಾರಿ ಸಿಬ್ಬಂದಿಯನ್ನು ಒದಗಿಸಲಾಗಿದೆ.
ಅಬಕಾರಿ ಅಕ್ರಮಗಳು ಕಂಡು ಬಂದಲ್ಲಿ ಪ್ರಕರಣ ದಾಖಲಿಸಲಾಗುತ್ತಿದೆ ಹೀಗಾಗಿ ಕರ್ನಾಟಕ ವಿಧಾನಸಭೆ ಸಾರ್ವತ್ರಿಕ ಚುನಾವಣೆ-೨೦೨೩ರ ಹಿನ್ನೆಲೆಯಲ್ಲಿ ಜಿಲ್ಲೆಯ ವ್ಯಾಪ್ತಿಯಾದ್ಯಂತ ಮಾ.೨೯, ೨೦೨೩ ರಿಂದ ಏ.೫ ೨೦೨೩ ರವರೆಗೆ ಒಟ್ಟು ೯೪ ದಾಳಿ ನಡೆಸಿ, ೫೪ ಅಬಕಾರಿ ಪ್ರಕರಣಗಳನ್ನು ದಾಖಲಿಸಿಕೊಂಡು ೩೭ ಆರೋಪಿಗಳನ್ನು ಬಂಧಿಸಿ ೨,೪೨,೬೯೦ ಲೀಟರ್ ಮದ್ಯ, ೧೯೫ ಲೀ ಹೊರ ರಾಜ್ಯದ ಮದ್ಯ, ೯೮೦೪,೬೦೦ ಲೀ ಬೀಯರ್ ಮತ್ತು ೧೪೦ ಲೀ ಕಳ್ಳಭಟ್ಟಿ ಸಾರಾಯಿಯನ್ನು ವಶಪಡಿಸಿಕೊಳ್ಳಲಾಗಿದೆ.

ಅದೇ ರೀತಿಯಲ್ಲಿ ೧೧ ದ್ವಿಚಕ್ರ ವಾಹನ, ೦೨ ಕಾರ್, ೦೧ ಆಟೋ, ೦೧ ಹನ್ನೆರಡು ಚಕ್ರದ ವಾಹನ (ಒಟ್ಟು ವಾಹನಗಳ ಅಂದಾಜು ಮೌಲ್ಯ ರೂ. ೨೮,೦೭,೦೦೦/-) ಜಪ್ತು ಪಡಿಸಿಕೊಳ್ಳಲಾಗಿದೆ. ಮದ್ಯ ಹಾಗೂ ಇತರೆ ವಸ್ತುಗಳ ಅಂದಾಜು ಮೌಲ್ಯ ರೂ. ೨೦,೩೩,೫೯೧/- ರೂ.ಗಳು ಆಗುತ್ತದೆ. ಹೀಗೆ ಒಟ್ಟು ರೂ. ೪೮,೪೦,೫೯೧/- ರೂಗಳು ವಶಪಡಿಸಿಕೊಳ್ಳಲಾಗಿದೆ. ಮುಂದೆಯೂ ಸಹ ಕಟ್ಟು ನಿಟ್ಟಾಗಿ ಕಾರ್ಯ ನಿರ್ವಹಿಸಲಾಗುವುದು ಎಂದು ಬೆಳಗಾವಿ ಜಿಲ್ಲೆಯ(ದಕ್ಷಿಣ) ಡೆಪ್ಯೂಟಿ ಕಮೀಷನರ್ ಆಫ್ ಎಕ್ಸೈಜ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

https://pragati.taskdun.com/2-65-croregoldsiezedbagepallichikkaballapura/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button