ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ಕರ್ನಾಟಕ ವಿಧಾನ ಸಭೆ ಚುನಾವಣೆಯ ಮತದಾನ ಮುಕ್ತಾಯವಾಗುತ್ತಿದ್ದಂತೆ ಎಕ್ಸಿಟ್ ಪೋಲ್ ಫಲಿತಾಂಶ ಹೊರಬೀಳುತ್ತಿವೆ. ಬಹುತೇಕ ಎಲ್ಲ ಸಮೀಕ್ಷೆಗಳೂ ರಾಜ್ಯ ವಿಧಾನಸಭೆ ಅತಂತ್ರವಾಗಲಿದೆ ಎನ್ನುವ ಸೂಚನೆ ನೀಡಿವೆ.
ಎಕ್ಸಿಟ್ ಪೋಲ್ ಫಲಿತಾಂಶದ ಪ್ರಕಾರ ಕಾಂಗ್ರೆಸ್ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ ಎನ್ನುವ ಸುಳಿವನ್ನು ನೀಡಿದ್ದು, ಯಾರಿಗೂ ಬಹುಮತ ಬಾರದು ಎಂದಿವೆ.
ಕಾಂಗ್ರೆಸ್ 100- 112, ಬಿಜೆಪಿ 83 -89, ಜೆಡಿಎಸ್ 21 -29 ಸ್ಥಾನಗಳನ್ನು ಗೆಲ್ಲಲಿವೆ ಎಂದು ಬಹುತೇಕ ಎಕ್ಸಿಟ್ ಪೋಲ್ ಗಳು ಹೇಳಿವೆ. ಇತರರು 1ರಿಂದ 6 ಸ್ಥಾನ ಗೆಲ್ಲಲಿದ್ದಾರೆ ಎನ್ನುವ ಫಲಿತಾಂಶ ಹೊರಬಿದ್ದಿದೆ.
ಮೂರು ಎಕ್ಸಿಟ್ ಪೋಲ್ ಗಳು ಕಾಂಗ್ರೆಸ್ ದೊಡ್ಡ ಪಕ್ಷವಾಗಲಿದೆ ಎಂದರೆ ಒಂದು ಎಕ್ಸಿಟ್ ಪೋಲ್ ಮಾತ್ರ ಬಿಜೆಪಿ ದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ ಎಂದಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ