Kannada NewsKarnataka News

ಬಿಜೆಪಿಯಿಂದ ಉಚ್ಛಾಟನೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಸವದತ್ತಿ ಪುರಸಭೆಯ ಅಧ್ಯಕ್ಷ ರಾಜಶೇಖರ ಕಾರದಗಿ ಅವರನ್ನು ಬಿಜೆಪಿಯಿಂದ ಉಚ್ಛಾಟಿಸಲಾಗಿದೆ.

ಬಿಜೆಪಿ ಗ್ರಾಮೀಣ ಅಧ್ಯಕ್ಷ ಸಂಜ ಪಾಟೀಲ ಈ ಕುರಿತು ಪ್ರಕಟಣೆ ನೀಡಿದ್ದಾರೆ.

ಭಾರತೀಯ ಜನತಾ ಪಾರ್ಟಿ ಬೆಳಗಾವಿ ಗ್ರಾಮಾಂತರ ಜಿಲ್ಲೆಯಲ್ಲಿ ಬರುವ ಸವದತ್ತಿ ಪುರಸಭೆಯ ಅಧ್ಯಕ್ಷ ರಾಜಶೇಖರ ಕಾರದಗಿ ಇವರು ಪಕ್ಷದಿಂದ ಆಯೋಜಿಸಿದ ಸಭೆಗಳಿಗೆ ಆವ್ಹಾನ ನೀಡಿದರೂ ಸಭೆಗಳಿಗೆ ಗೈರಾಗಿದ್ದು ಕಂಡುಬಂದಿದೆ.

ಸುಮಾರು ೨ ತಿಂಗಳ ಕಾಲದಿಂದ ಕಾಂಗ್ರೆಸ್ ಪಕ್ಷದಲ್ಲಿ ಅವರು ಕಾರ್ಯಚಟುವಟಿಕೆಗಳಲ್ಲಿ ಭಾಗವಹಿಸಿತ್ತದ್ದರು ಎಂದು ಮಂಡಲ ಅಧ್ಯಕ್ಷರು ಸಾಕ್ಷಿಸಮೇತ ನನಗೆ ವರದಿ ನೀಡಿರುತ್ತಾರೆ.

ಆ ವರದಿ ಆದರಿಸಿ ಅವರನ್ನು ಭಾರತೀಯ ಜನತಾ ಪಾರ್ಟಿ ಪ್ರಾಥಮಿಕ ಸದಸ್ಯತ್ವದಿಂದ ಹಾಗೂ ಇನ್ನಿತರ ಎಲ್ಲಾ ಜವಾಬ್ದಾರಿಗಳಿಂದ ಈ ಕ್ಷಣದಿಂದ ಅವರನ್ನು ಪಕ್ಷದಿಂದ ಉಚ್ಚಾಟಿಸಿ ಪಕ್ಷದಿಂದ ಬಿಡುಗಡೆಗೊಳಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

https://pragati.taskdun.com/election-expenditure-watchersavailablepublic-visit/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button