Belagavi NewsBelgaum NewsKannada NewsKarnataka News
*ಚೀನಾ ದೇಶಕ್ಕೆ ಚಿಪ್ಪು ಹಂದಿಯನ್ನು ರಫ್ತು: ಕಳ್ಳರ ಗ್ಯಾಂಗ್ ಅರೆಸ್ಟ್*
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಚೀನಾ ದೇಶಕ್ಕೆ ಚಿಪ್ಪು ಹಂದಿಯನ್ನು ರಫ್ತು ಮಾಡುತ್ತಿದ್ದ ಅಂತರಾಜ್ಯ ಕಳ್ಳರ ಗ್ಯಾಂಗ್ ಗೆ ಅರಣ್ಯ ಇಲಾಖೆ ಅಧಿಕಾರಿಗಳು ಖೆಡ್ಡಾ ತೋಡಿದ್ದಾರೆ.
ಖಾನಾಪುರ ವಲಯದ ಅರಣ್ಯ ಇಲಾಖೆ ಅಧಿಕಾರಿಗಳು ನಡೆಸಿದ ಈ ಮಿಂಚಿನ ಕಾರ್ಯಾಚರಣೆಯಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಇನ್ನಿಬ್ಬರು ಕಳ್ಳರು ಎಸ್ಕೆಪ್ ಆಗಿದ್ದಾರೆ. ಚೀನಾದಲ್ಲಿ ಔಷಧಿ ಉತ್ಪಾದನೆಗೆ ಅತಿಹೆಚ್ಚು ಚಿಪ್ಪು ಹಂದಿಗಳನ್ನು ಬಳಸಲಾಗುತ್ತದೆಯಂತೆ. ಈ ಹಿನ್ನೆಲೆಯಲ್ಲಿ ಚಿಪ್ಪು ಹಂದಿ ಬೇಟೆಯಾಡಿ ಚೀನಾಗೆ ರಫ್ತು ಮಾಡಲು ಮುಂದಾಗಿದ್ದ ಕಳ್ಳರ ಈ ಜಾಲ ಇದೀಗ ಲಾಕ್ ಆಗಿದೆ.
ಲೋಂಡಾದಲ್ಲಿ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ಕಳ್ಳರ ಗ್ಯಾಂಗ್ ಅನ್ನು ಖಾನಾಪುರ ಎಸಿಎಫ್ ಸುನೀತಾ ನಿಂಬರಗಿ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆಸಿ ಅರೆಸ್ಟ್ ಮಾಡಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ