ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬೆಳಗಾವಿ ಸೇರಿದಂತೆ ಉತ್ತರ ಕರ್ನಾಟಕದಾದ್ಯಂತ ಕಳೆದ ಎರಡು ವಾರಗಳಿಂದ ತೀವ್ರತರವಾದ ಚಳಿಗಾಳಿ ಬೀಸುತ್ತಿದೆ. ಅತೀಯಾದ ತಂಪು ವಾತಾವರಣದಿಂದ ಹೃದಯದ ಮೇಲೆ ಪರಿಣಾಮ ಬೀರುತ್ತದೆ. ಹೃದ್ರೋಗದಿಂದ ಬಳಲುತ್ತಿದ್ದು, ಎಂಜಿಯೋಪ್ಲಾಸ್ಟಿ, ಹೃದಯ ಶಸ್ತ್ರಚಿಕಿತ್ಸೆ ಹಾಗೂ ವಿವಿಧ ಹೃದಯ ಚಿಕಿತ್ಸಾ ಪ್ರಕ್ರಿಯೆಗಳಿಗೆ ಒಳಗಾಗಿದ್ದರೆ ತೊಂದರೆಗೆ ಒಳಗಾಗಬೇಕಾಗುತ್ತದೆ.
ಆದ್ದರಿಂದ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳುವದಲ್ಲದೇ, ಹೃದಯದ ಕುರಿತು ಹೆಚ್ಚಿನ ಕಾಳಜಿವಹಿಸಬೇಕೆಂದು ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದ ಮುಖ್ಯ ಹೃದಯ ಶಸ್ತ್ರಚಿಕಿತ್ಸಕರಾದ ಡಾ. ರಿಚರ್ಡ ಸಾಲ್ಢಾನಾ ಅವರು ಸಲಹೆ ನೀಡಿದ್ದಾರೆ.
ಈ ತಂಪು ವಾತಾವರಣದಲ್ಲಿ ರಕ್ತನಾಳ ಹಾಗೂ ಅಪಧಮನಿಗಳು ಚಿಕ್ಕದಾಗಿ, ಹೃದಯಕ್ಕೆ ರಕ್ತ ಹಾಗೂ ಆಮ್ಲಜನಕ ಸಂಚಾರದಲ್ಲಿ ವ್ಯತ್ಯಯ ಉಂಟಾಗುತ್ತದೆ. ಇದರಿಂದ ಹೃದಯವು ರಕ್ತ ಸರಬರಾಜು ಮಾಡಲು ಹೆಚ್ಚು ಶ್ರಮವಹಿಸಬೇಕಾಗುವದರಿಂದ ಹೃದಯಬಡಿತ ಹಾಗೂ ರಕ್ತೊದೊತ್ತಡ ಹೆಚ್ಚಾಗುತ್ತದೆ.
ಹೃದ್ರೋಗದಿಂದ ಬಳಲುತ್ತಿರುವವರು ಹಾಗೂ ವಯಸ್ಸಾದವರಿಗೆ ಈ ಚಳಿಗಾಲವು ಹೃದಯಾಘಾತವನ್ನು ತಂದೊಡ್ಡುವ ಸಂಭವ ಅಧಿಕವಾಗಿರುತ್ತದೆ. ಆದ್ದರಿಂದ ಕೆಲ ಸಾಮಾನ್ಯ ವಿಧಾನಗಳನ್ನು ಅನುಸರಿಸುವ ಮೂಲಕ ಹೃದಯದ ಆರೋಗ್ಯವನ್ನು ಕಾಪಾಡಬಹುದು.
ಬೆಳ್ಳಂಬೆಳಗ್ಗೆ ವಾಯುವಿಹಾರ (ವಾಕ್)ವನ್ನು ತ್ಯಜಿಸಿ. ಬಿಸಿಲು ಬಿದ್ದ ಮೇಲೆ ಸ್ವೀಟರ, ಕೈಗವಸು, ತಲೆಗೆ ಸ್ಕ್ರಾಪ, ಕಾಲಚೀಲ ಬಳಸಿ ತಂಪು ವಾತಾವರಣದಿಂದ ದೂರವಿರಿ.
ಮನೆಯೊಳಗಡೆ ಬೆಚ್ಚಗೆ ಇರಿ. ಯೋಗಾ, ಉಸಿರಾಟದ ವ್ಯಾಯಾಮ, ನಡೆದಾಡುವದು ಮಾಡಿ.
ಮನೆಯಲ್ಲೇ ತಯಾರಿಸಿದ ಶುದ್ದವಾದ ಬಿಸಿಯಾದ ಊಟ ಹಾಗೂ ಬಿಸಿನೀರು ಸೇವಿಸಿ. ದೇಹವನ್ನು ಬೆಚ್ಚಗೆ ಇಟ್ಟುಕೊಳ್ಳಿ. ಖಾರ ಹಾಗೂ ಮಸಾಲೆಯುಕ್ತ ಬಹಳ ಬೇಯಿಸಿದ ಆಹಾರವನ್ನು ಸೇವಿಸಬೇಡಿ.
ಎದೆನೋವು ಅಥವಾ ಬೆವರುವುದು ಕಂಡು ಬಂದರೆ ಕೂಡಲೇ ವೈದ್ಯರನ್ನು ಸಂಪರ್ಕಿಸಿ. ನಿಯಮಿತವಾದ ಔಷಧೋಪಚಾರವನ್ನು ಮಾಡಿಕೊಳ್ಳಿ ಮತ್ತು ವೈದ್ಯರನ್ನು ಸಂಪರ್ಕಿಸಿ.
ಈ ಸಾಂಕ್ರಾಮಿಕ ಕೋವಿಡ್ ಸಂದರ್ಭದಲ್ಲಿ ಸಮಾರಂಭಗಳಿಂದ ದೂರವಿರಿ ಮತ್ತು ರಾತ್ರಿ ಪ್ರವಾಸವನ್ನು ಮಾಡಬೇಡಿ.
ಬೂಸ್ಟರ ಡೋಸ್ ಪಡೆದುಕೊಳ್ಳಿ. ಆರೋಗ್ಯವನ್ನು ಕಾಪಾಡಿಕೊಳ್ಳಿ.
ವ್ಯಾಕ್ಸಿನ್ ಹೊಟೆಲ್ ಪ್ರಿಡ್ಜ್ ನಲ್ಲಿಟ್ಟುಕೊಂಡಿದ್ದ ನರ್ಸ್!
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ