Kannada NewsKarnataka NewsLatestPolitics

*ಮತ್ತೊಂದು ಭೀಕರ ಬೆಂಕಿ ಅವಘಡ; ಮುಗಿಲೆತ್ತರಕ್ಕೆ ಹೊತ್ತಿ ಉರಿದ ಕಾರ್ಖಾನೆ*

ಪ್ರಗತಿವಾಹಿನಿ ಸುದ್ದಿ: ಯಾದಗಿರಿ ಜಿಲ್ಲೆಯ ಕೈಗಾರಿಕಾ ಪ್ರದೇಶದಲ್ಲಿ ಕಾರ್ಖಾನೆಗೆ ಬೆಂಕಿ ಬಿದ್ದ ಪರಿಣಾಮ ಇಡೀ ಕಾರ್ಖಾನೆ ಬೆಂಕಿಗಾಹುತಿಯಾಗಿರುವ ಘಟನೆ ನಡೆದಿದೆ.

ಬಡಿಯಾಲ್ ಕೈಗಾರಿಕಾ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಕಚ್ಚಾ ವಸ್ತುಗಳನ್ನು ಕರಗಿಸಿ ಪುಡಿ ಮಾಡುವ ಕಾರ್ಖಾನೆಯಲ್ಲಿ ಬೆಂಕಿ ಅವಘಡ ಸಂಭವಿಸಿದೆ. ರಿಯಾಕ್ಟರ್ ಅನ್ ಲೋಡ್ ಮಾಡುವಾಗ ಈ ಘಟನೆ ನಡೆದಿದೆ.

ಬೆಂಕಿಯ ತೀವ್ರತೆಗೆ ಫ್ಯಾಕ್ಟರಿ ತುಂಬೆಲ್ಲಾ ಬೆಂಕಿ ಹೊತ್ತಿಕೊಂಡಿದ್ದು, ಮುಗಿಲೆತ್ತರದವರೆಗೂ ಧಗಧಗಿಸಿ ಉರಿದಿದೆ. ಸ್ಥಳಕ್ಕೆ ಪೊಲಿಸರು, ಅಗ್ನಿಶಾಮಕ ಸಿಬ್ಬದಿ ದೌಡಾಯಿಸಿದ್ದು, ಬೆಂಕಿ ನಂದಿಸಲು ಹರಸಾಹಸಪಟ್ಟಿದ್ದಾರೆ.


Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button